Site icon Ullalavani

ಕಿನ್ಯ: ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲ ವಾರ್ಷಿಕೋತ್ಸವ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಕಿನ್ಯ ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲದ 46ನೆಯ ವಾರ್ಷಿಕೋತ್ಸವ ಕಿನ್ಯ ದುರ್ಗಾಪುರದಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕ್ಯಾಪನ್ ಡಿ. ಮಾಧವ ಶೆಟ್ಟಿ ಮಾತನಾಡಿ ಯಕ್ಷ ಅಂದರೆ ಪೂಜೆ. ಗಾನವೆಂದರೆ ಕುಣಿತ. ಅಂತಹ ಅದ್ಭುತ ಕಲೆಯನ್ನು ಪೂಜಿಸುವುದು ಯಕ್ಷಗಾನದ ತತ್ವ ಎಂದರು.

ಕಾರ್ಯಕ್ರಮದಲ್ಲಿ ಪಡ್ರೆ ಚಂದ್ರು, ಯಕ್ಷಗಾನ ನಾಟ್ಯಗುರು ಸಬ್ಬಣಕೋಡಿ ರಾಮ್ ಭಟ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದ ಈಶ್ವರ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.

ಸೋಮೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್, ತೊಕ್ಕೊಟ್ಟು ಭಗವತೀ ಬ್ಯಾಂಕಿನ ಅಧ್ಯಕ್ಷ ಸದಾಶಿವ ಉಳ್ಳಾಲ್, ಸೋಮೇಶ್ವರ ರಕ್ತೇಶ್ವರಿ ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ಎಸ್. ರಾಮ್‍ದಾಸ್, ಕಿನ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಪೂಜಾರಿ ಉಪಸ್ಥಿತರಿದ್ದರು.

ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲದ ಅಧ್ಯಕ್ಷ ಮಹಾಬಲ ಪೂಂಜ, ಗೌರವಾಧ್ಯಕ್ಷ ರಾಮಯ್ಯಕಿಲ್ಲೆ ಉಪಸ್ಥಿತರಿದ್ದರು.

ಯುವಕ ಮಂಡಲದ ಸಂಚಾಲಕ ಬಾಬು ಶ್ರೀ ಶಾಸ್ತಾ ಕಿನ್ಯ ಸ್ವಾಗತಿಸಿದರು. ಪತ್ರಕರ್ತ ವಿದ್ಯಾಧರ್ ಶೆಟ್ಟಿ ಮತ್ತು ರಮೇಶ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Exit mobile version