ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕಲ್ಲಾಪು: `ಮಾನವ ತನಗಾಗಿ ಬದುಕದೆ, ಇತರರಿಗಾಗಿ ಬದುಕುವಂತಾಗಬೇಕು, ಮಾನವೀಯ ಸೇವೆಗೆ ಒಂದಲ್ಲ ಒಂದು ದಿನ ಪ್ರತಿಫಲ ನಿಶ್ಚಿತ’ ಹೀಗೆಂದು ಪ್ರತಿಪಾದಿಸಿದವರು ಆರೋಗ್ಯ ಸಚಿವ ಯು.ಟಿ.ಖಾದರ್.
ಕಲ್ಲಾಪು ಸೇವಾ ಸಮಿತಿ ಆಶ್ರಯದಲ್ಲಿ ಕಲ್ಲಾಪು ಮೈದಾನದಲ್ಲಿ ಮಾಜಿ ಕೌನ್ಸಿಲರ್ ಉಸ್ಮಾನ್ ಕಲ್ಲಾಪು ನೇತೃತ್ವದಲ್ಲಿ ನಡೆದ ಬಡ ರೋಗಿಗಳಿಗೆ ಸಹಾಯಧನ ವಿತರಿಸಿ ಅವರು ಮಾತನಾಡಿದರು.
40 ವರ್ಷ ಮೇಲ್ಪಟ್ಟವರಿಗೆ ಓದುವ ಕನ್ನಡಕ, ಐದು ವರ್ಷದೊಳಗಿನ ಮಕ್ಕಳಿಗೆ ಉಚಿತ ಕಣ್ಣಿನ ಚಿಕಿತ್ಸೆ, ಅಗತ್ಯಬಿದ್ದರೆ ಕನ್ನಡ ವಿತರಣೆ, ಶಾಲಾ ಮಕ್ಕಳಿಗೆ ಉಚಿತ ಚಿಕಿತ್ಸೆ ಹಾಗೂ ಅಗತ್ಯಬಿದ್ದರೆ ಔಷಧ ವಿತರಣೆ ಮುಂತಾದ ಹಲವಾರು ಯೋಜನೆಗಳಲ್ಲಿ ಸರ್ಕಾರ ಜಾರಿಗೆ ತಂದಿದ್ದು ಈ ಬಗ್ಗೆ ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಜನರಿಂದ Pಮತ ಪಡೆದ ಬಳಿಕ ಅದರ ಋಣ ತೀರಿಸುವ ಕೆಲಸ ಹೆಚ್ಚಿನ ಜನಪ್ರತಿನಿಧಿಗಳಿಂದ ನಡೆಯದ ಕಾರಣ ನಾವು ನೀಡುವ ಮತಕ್ಕೆ ಬೆಲೆಯೇ ಇಲ್ಲದಂತಾಗಿದೆ, ಆದರೆ ಉಸ್ಮಾನ್ ಕಲ್ಲಾಪು ಮತದಾರರ ಋಣ ತೀರಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಸರ್ಕಾರ, ದಾನಿಗಳ ನೆರವಿನಿಂದ ಹಾಗೂ ವೈಯುಕ್ತಿಕವಾಗಿ ಮಾಡುತ್ತಿರುವುದು ಇತರ ಜನಪ್ರತಿನಿಧಿಗಳಿಗೂ ಮಾದರಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಸತೀಶ್ ಉಳ್ಳಾಲ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡರೋಗಿಗಳು, ಅಂಗವೈಕಲ್ಯ ಹೊಂದಿದ 20 ಮಂದಿಗೆ ಧನ ಸಹಾಯ ನೀಡಲಾಯಿತು. ತಾಲೂಕು ನ್ಯಾಯಾಧೀಶರಾಗಿ ಆಯ್ಕೆಯಾದ ಅಬ್ದುಲ್ ಸಲೀಂ ಅವರನ್ನು ಸನ್ಮಾನಿಸಲಾಯಿತು.
ನಗರಸಭಾ ಸದಸ್ಯರಾದ ಮಹಮ್ಮದ್ ಮುಕಚ್ಚೇರಿ, ಬಾಜಿಲ್ ಡಿಸೋಜ, ಅಬ್ದುಲ್ ಫತಾಕ್, ಯು.ಎ.ಇಸ್ಮಾಯಿಲ್, ನಗರ ಪಂಚಾಯಿತಿ ಮಾಜಿ ಕೌನ್ಸಿಲರ್ ಜೆ.ಮಹಮ್ಮದ್, ಹಿರಿಯರಾದ ಸಂಜೀವ ಭಂಡಾರಿ, ಉದ್ಯಮಿ ನಾಸೀರ್ ಮೊಯಿದ್ದೀನ್ ಮೊದಲಾದವರು ಉಪಸ್ಥಿತರಿದ್ದರು.
ಮಾಜಿ ಕೌನ್ಸಿಲರ್ ಉಸ್ಮಾನ್ ಕಲ್ಲಾಪು ವಂದಿಸಿದರು. ಅಯೂಬ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.
`ಬಡವರಿಗೂ ಸರ್ಕಾರಿ ಆಸ್ಪತ್ರೆ ಬಗ್ಗೆ ನಿರ್ಲಕ್ಷ್ಯ ಭಾವನೆ ಇದ್ದು ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ತನ್ನ ಪತ್ನಿಗೆ ಅನಾರೋಗ್ಯ ಕಾಡಿದಾಗ ಲೇಡಿಗೋಷನ್ ವೈದ್ಯರನ್ನು ಮನೆಗೆ ಕರೆಸಿ ಚಿಕಿತ್ಸೆ ಕೊಡಿಸಿದ್ದೆ. ಸರ್ಕಾರಿ ವೈದ್ಯರು ಸಚಿವರ ಮನೆಯಲ್ಲಿದ್ದಾರೆ ಎಂದು ಜನ ಆರೋಪಿಸಿದರು, ಲೇಡಿಗೋಷನ್‍ನಲ್ಲಿ ಪ್ರತೀ ತಿಂಗಳು 400 ಹೆರಿಗೆಗಳಾಗುತ್ತಿದ್ದು ಮಂಗಳೂರಿನ ಹತ್ತು ಆಸ್ಪತ್ರೆಗಳಿಗೆ ಇದು ಸಮ’
ಯು.ಟಿ.ಖಾದರ್, ಆರೋಗ್ಯ ಸಚಿವ