ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುಂಪಲ: ಎರಡು ದಶಕಗಳ ಹಿಂದೆ ಡಾಮರೀಕರಣಗೊಂಡ ಕುತ್ತಾರು ಮದಕ, ಅಗೆಲ, ಕಂಪ, ಬೊಳ್ಯ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಇಲ್ಲಿನ ಸಾರ್ವಜಿನಿಕರು ಚುನಾವಣಾ ಬಹಿಷ್ಕಾರ ಮಾಡಿದರು. ಈ ಬಗ್ಗೆ ವರ್ಷಗಳ ಹಿಂದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಜನಪ್ರತಿನಿಧಿಗಳ ಗಮನಸೆಳೆದರೂ ಯಾವುದೆ ಪ್ರಯೋಜನ ಸಿಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಾರ್ವಜನಿಕರು ಪ್ರತಿಭಟನೆ ನಡೆಸಿ ಚುನಾವಣಾ ಬಹಿಷ್ಕಾರ ನಡೆಸಿದರು.
ಪ್ರತಿಭಟನಾ ಸಭೆಯಲ್ಲಿ ಸ್ಥಳೀಯರಾದ ಬಿ. ಮುಹಮ್ಮದ್, ಗಂಗಯ್ಯ, ಮುನ್ವರ್, ರಿಝ್ವಾನ್, ಅಶ್ವತ್, ನವೀನ್, ನಾಗರಾಜ್ ಬೊಲ್ಯ ಮುಂತಾದವರು ಭಾಗವಹಿಸಿದ್ದರು.
ಮಾಜಿ. ಜಿ.ಪ ಉಪಾಧ್ಯಕ್ಷ ಸತೀಶ್ ಕುಂಪಲ ಬೇಟಿ
ಮಾಜಿ. ಜಿ.ಪ ಉಪಾಧ್ಯಕ್ಷ ಸತೀಶ್ ಕುಂಪಲ ಪ್ರತಿಭಟನ ಸ್ಥಳಕ್ಕೆ ಬೇಟಿ ನೀಡಿ ಚುನಾವಣೆ ನಂತರ ಈ ವಿಷಯದ ಕುರಿತು ಸಭೆ ಕರೆದು ಚರ್ಚಿಸಿ ರಸ್ತೆಯ ಕಾಮಗಾರಿ ಪ್ರಾರಂಭಿಸಲಾಗುವುದು. ನಿವು ಬಿಜೆಪಿ ಪಕ್ಷಕ್ಕೆ ಮತ ಹಾಕಿ ನಮ್ಮನು ಪ್ರಥಮವಾಗಿ ಬೆಂಬಲಿಸಿ ಎಂದರು.