Site icon Ullalavani

ಮುಡಿಪು : ಗುಹೆ ಪತ್ತೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮುಡಿಪು: ಇಲ್ಲಿಗೆ ಸಮೀಪದ ಇನ್‍ಫೋಸಿಸ್ ಬಳಿಯ ಪುಚ್ಚೆಕಟ್ಟೆ ಎಂಬಲ್ಲಿ ಕಳೆದ ಮೂರು ವರ್ಷದ ಹಿಂದೆ ಪತ್ತೆಯಾಗಿದ್ದ ಗುಹೆಯೊಂದು ಇದೀಗ ಭಾನುವಾರ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದಾಗ ಅದೇ ಗುಹೆಯೂ ಮತ್ತೊಂದು ಭಾಗದಿಂದ ಮತ್ತೆ ಪತ್ತೆಯಾಗಿ ಆತಂಕ ವ್ಯಕ್ತವಾಯಿತು.

ಕಳೆದ ಮೂರು ವರ್ಷಗಳ ಹಿಂದೆ ಪೈಪ್‍ಲೈನ್ ಕಾಮಗಾರಿ ನಡೆಯುತ್ತಿದ್ದಾಗ ಮುಡಿಪುವಿನ ಪುಚ್ಚೆಕಟ್ಟೆ ಬಳಿ ಗುಹೆ ಪತ್ತೆಯಾಗಿತ್ತು.

ಬಳಿಕಮುಚ್ಚಲಾಗಿತ್ತು. ಅಂದು ಪತ್ತೆಯಾದ ಗುಹೆಯ ಬಳಿಯೇ ಇದೀಗ ಮತ್ತೊಂದು ಭಾಗದಲ್ಲಿ ಇದೇ ಗುಹೆಯು ಮತ್ತೆ ಪ್ರತ್ಯಕ್ಷವಾಗಿದೆ. ಮುಡಿಪು ರಸ್ತೆಯ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಇನ್‍ಫೋಸಿಸ್ ಬಳಿಯ ಪುಚ್ಚೆಕಟ್ಟೆ ಬಳಿ ಜೆಸಿಬಿ ಯಂತ್ರದ ಮೂಲಕ ರಸ್ತೆ ಬದಿಯನ್ನು ಅಗೆಯುತ್ತಿದ್ದಾಗ ಗುಹೆ ಪತ್ತೆಯಾಗಿದೆ.

ಇದರೊಳಗೆ ಇಳಿದ ಕೆಲವರು ಗುಹೆಯು ವಿಶಾಲವಾಗಿದ್ದು ಎರಡು ಕಡೆಗಳಲ್ಲಿ ಸುರಂಗ ಮಾರ್ಗದ ರೀತಿಯಲ್ಲಿ ಕಂಡು ಬರುತ್ತಿದೆ ಎಂದಿದ್ದಾರೆ. ಗುಹೆ ಪತ್ತೆಯಾದ ಸುದ್ದಿ ತಿಳಿದ ನಾಗರಿಕರು ಗುಹೆಯ ಬಳಿ ಜಮಾಯಿಸಿದಾಗ ಕೆಲ ಹೊತ್ತು ಇಲ್ಲಿ ರಸ್ತೆಸಂಚಾರ ಅಸ್ತವ್ಯಸ್ತವಾಗಿತ್ತು.

ರಸ್ತೆ ಸಮೀಪವೇ ಈ ಗುಹೆ ಪತ್ತೆಯಾಗಿರುವುದರಿಂದ ರಸ್ತೆ ಅಗಲೀಕರಣ ಕಾಮಗಾರಿ ನಡೆಸುವ ವೇಳೆ ಕುಸಿದು ಬೀಳುವ ಸಂಭವ ಇದ್ದು ರಸ್ತೆ ಅಗಲೀಕರಣದ ಕಾರ್ಮಿಕರು ಭಯದ ವಾತವಾರಣದಲ್ಲೇ ಕೆಲಸ ಮಾಡುತ್ತಿದ್ದಾರೆ.

Exit mobile version