Site icon Ullalavani

ಭಯೋತ್ಪಾದನೆ ವಿರುದ್ದ ಜನಾಂದೊಲನ: ವಿದ್ಯಾರ್ಥಿಗಳಿಂದ ಸೈಕಲ್ ರ್ಯಾಲಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಅಳೇಕಲ : ಎಸ್ಸೆಸ್ಸೆಫ್ ರಾಜ್ಯ ಸಮಿತಿ ಘೋಷಿಸಿರುವ ಭಯೋತ್ಪಾದನೆ ವಿರುದ್ದ ಜನಾಂದೊಲನ ಜನವರಿ 30ರಿಂದ ಮಾರ್ಚ್ 20 ವರೆಗೆ ಇದರ ಪ್ರಯುಕ್ತ ಎಸ್ಸೆಸ್ಸೆಫ್ ಅಳೇಕಲ ಶಾಖೆಯ ವತಿಯಿಂದ ವಿದ್ಯಾರ್ಥಿಗಳಿಂದ ಸೈಕಲ್ ರ್ಯಾಲಿ ಶನಿವಾರ ಉಳ್ಳಾಲ ಅಳೇಕಲದಲ್ಲಿ ನಡೆಯಿತು.

ಅಬೂಝಿಯಾದ್ ಮದನಿ ಪಟ್ಟಾಂಬಿರವರು ಅಳೇಕಲ ಹಝ್ರತ್ ಅಚ್ಚೆಸಾಹಿಬ್ ವಲಿಯುಲ್ಲಾಹಿ ದರ್ಗಾ ಝೀಯಾತ್ ನೆರವೇರಿಸಿ ಸೈಕಲ್ ರ್ಯಾಲಿಗೆ ಚಾಲನೆ ನೀಡಿದರು.

ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ಪ್ರ.ಕಾರ್ಯದರ್ಶಿ ಜಾಫರ್ ಯು.ಎಸ್, ಎಸ್ಸೆಸ್ಸೆಫ್ ಅಳೆಕಲ ಶಾಖೆಯ ಪ್ರ.ಕಾರ್ಯದರ್ಶಿ ಅರೀಫ್, ಸ್ಥಳಿಯರಾದ ಫಾರೂಕ್ ಯು.ಡಿ, ಇಬ್ರಾಹಿಂ ಯು.ಡಿ, ಅಶ್ರಫ್, ಲತೀಫ್, ರಿಯಾನ್, ಹನೀಫ್ ಮುಸ್ಲಿಯಾರ್, ಶಫೀಕ್, ನಾಫಿ, ಆಶಿಕ್, ಶಾಕಿರ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

Exit mobile version