Site icon Ullalavani

ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಕಣಕ್ಕೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕಿನ್ಯಾ: ಹಲವು ವರ್ಷಗಳಿಂದ ಕಾಂಗ್ರೆಸ್‍ನಲ್ಲಿ ದುಡಿಯುತ್ತಿದ್ದ, ತಾ.ಪಂ ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ಕಿನ್ಯಾ ಪಂಚಾಯಿತಿ ಸದಸ್ಯ ಹಮೀದ್ ಕಿನ್ಯಾ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್‍ನಲ್ಲಿ ಸಕ್ರಿಯ ಕಾರ್ಯಕರ್ತನಾಗಿ ದುಡಿದು ನಾಲ್ಕು ಬಾರಿ ಕಿನ್ಯಾ ಪಂಚಾಯಿತಿ ಸದಸ್ಯರಾಗಿ ಹಾಗೂ ಎರಡು ಬಾರಿ ಉಪಾಧ್ಯಕ್ಷರಾಗಿ ಹಾಗೂ ಒಂದು ಬಾರಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದ ಹಮೀದ್ ಅವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂ ಡಿದ್ದರು. ಈ ಹಿನ್ನೆಲೆಯಲ್ಲಿ ಕಿನ್ಯಾ ಭಾಗದಲ್ಲಿ ಚಿರಪರಿಚಿತರು. ಕಡೆಯ ಕ್ಷಣದವರೆಗೂ ತಲಪಾಡಿ -ಕಿನ್ಯಾದಲ್ಲಿ ತಾ.ಪಂ ಅಭ್ಯರ್ಥಿ ಸ್ಥಾನ ಅವರಿಗೆ ಸಿಗುವ ನಿರೀಕ್ಷೆಯಿದ್ದರೂ ಅದು ಕೊನೆ ಪಕ್ಷದಲ್ಲಿ ಹುಸಿಯಾಗಿದೆ. ಪಕ್ಷಕ್ಕಾಗಿ ನಡೆಸಿದ ಶ್ರಮವನ್ನಾದರೂ ಗುರುತಿಸುತ್ತಾರೆಂಬ ವಿಶ್ವಾಸ ಇತ್ತು. ಆದರೆ ಪಕ್ಷದ ಒಳಗಿದ್ದವರೇ ಅದನ್ನು ತಪ್ಪಿಸಿದ್ದಾರೆ. ಆದರೂ ಪಕ್ಷ ಬಿ.ಫಾರಂ ಸಲ್ಲಿಕೆ ವೇಳೆ ಬದಲಾವಣೆಯ ನಿರೀಕ್ಷೆ ಇದೆ ಅನ್ನುವ ಅಭಿಪ್ರಾಯ ಹಮೀದ್ ಬೆಂಬಲಿಗರದ್ದಾಗಿದೆ.

Exit mobile version