ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಮೂರು ವರ್ಷಗಳಿಂದ ಮಡಿಕೇರಿ ಮತ್ತು ಉಳ್ಳಾಲದ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಶೀದಾ ಭಾನು ಇದೀಗ ಜಿಲ್ಲಾ ಪಂಚಾಯಿತಿ ಅಭ್ಯರ್ಥಿಯಾಗಿ ಕೊಣಾಜೆ ಕ್ಷೇತ್ರದಿಂದ ಕಣದಲ್ಲಿದ್ದಾರೆ.
ಶೈಕ್ಷಣಿಕವಾಗಿ ಎಲ್ಲಾ ಧರ್ಮದ ಮಹಿಳೆಯರು ಬೆಳೆಯಬೇಕು. ಶಿಕ್ಷಣ ಪಡೆದು ಸ್ವಂತ ಕಾಲಿನಲ್ಲಿ ನಿಲ್ಲುವಂತಾಗಬೇಕು. ಅದರ ಜತೆಗೆ ಕುಟುಂಬ ನಿರ್ವಹಣೆ ಮಾತ್ರವಲ್ಲ, ರಾಜಕೀಯ ಪ್ರವೇಶ ಮಾಡಿ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಅನ್ನುವ ಉದ್ದೇಶದೊಂದಿಗೆ ರಾಜಕೀಯ ಪ್ರವೇಶಿಸುತ್ತಿದ್ದೇನೆ ಅನ್ನುವ ರಶೀದಾ ಮಲಾರ್ ಮೂಲದವರಾಗಿದ್ದಾರೆ. ಅವರನ್ನು ಉಳ್ಳಾಲಕ್ಕೆ ವಿವಾಹ ಮಾಡಿಕೊಡಲಾಗಿದ್ದು, ಅವರ ತಂದೆ ಮುಸ್ತಾಫ ಈ ಹಿಂದೆ ಪಾವೂರು ಕ್ಷೇತ್ರದ ತಾ. ಪಂ ಸದಸ್ಯರಾಗಿದ್ದರು. ಅವರ ಪ್ರೇರಣೆಯಿಂದಲೇ ರಾಜಕೀಯ ಪ್ರವೇಶ ಮಾಡಿರುವ ರಶೀದಾ ಅವರು ವಿವಾಹಿತೆಯಾಗಿದ್ದು, ಒಂದು ಮಗುವಿನ ತಾಯಿಯೂ ಹೌದು. ನಿನ್ನೆ ಸಚಿವರ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ನಾಮಪತ್ರ ಸಲ್ಲಿಸಿದ್ದಾರೆ.