ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಮಂಗಳೂರು ವಿಶ್ವವಿದ್ಯಾನಿಲಯವು ಕಳೆದ ಡಿಸೆಂಬರ್‍ನಲ್ಲಿ ನಡೆಸಿದ ಪದವಿ ಪರೀಕ್ಷೆಗಳ ಪರೀಕ್ಷಾ ಫಲಿತಾಂಶವು ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ನಲ್ಲಿ ಫೆ.12ರಂದು(ಇಂದು) ಲಭ್ಯವಾಗಲಿದೆ.
ಪ್ರಥಮವಾಗಿ ಬಿ.ಎಡ್. ಬಿ.ಎಚ್.ಎಮ್., ಬಿ.ಎಚ್.ಎಸ್. ಮತ್ತು ಬಿ.ಎ.ಎಸ್.ಎಲ್.ಪಿ. ಪದವಿಗಳ ಫಲಿತಾಂಶವನ್ನು ಪ್ರಕಟಿಸಿ ಬಳಿಕ ಪೆ. 15ರಂದು ಉಳಿದ ಎಲ್ಲಾ ಕೋರ್ಸುಗಳ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಮಂಗಳೂರು ಪರೀಕ್ಷಾಂಗ ಕುಲಸಚಿವಾಲಯದ ಪ್ರಕಟನೆ ತಿಳಿಸಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಳೆದ ಶೈಕ್ಷಣಿಕ ವರ್ಷದಿಂದ odd ಮತ್ತು even ಎರಡೂ ಸೆಮಿಸ್ಟರ್‍ನ ಪರೀಕ್ಷೆಗಳು ಜೊತೆಗೆ ನಡೆಸಲಾಗಿದ್ದು ಪರೀಕ್ಷಾಕಾರ್ಯ ಮುಗಿಸುವಲ್ಲಿ ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳಲಾಗಿತ್ತು. ಜೊತೆಗೆ ಕೆಲ ಸಮಯಗಳ ಹಿಂದೆ ಜಿಲ್ಲೆಯಲ್ಲಿ ನಡೆದ ಅಹಿತಕರ ಫಟನೆಗಳ ಕಾರಣಗಳಿಂದ ಕೆಲವು ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಈ ಎಲ್ಲಾ ಕಾರಣಗಳಿಂದ ಈ ಬಾರಿ ಫಲಿತಾಂಶ ಸ್ವಲ್ಪ ವಿಳಂಬವಾಗಿದೆ ಎಂದು ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಎಂ.ಖಾನ್ ಅವರು ಸ್ಪಷ್ಟಪಡಿಸಿದ್ದಾರೆ.