ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಮನುಷ್ಯನ ಬದುಕಿಗೆ ಜಾನುವಾರುಗಳ ಕೊಡುಗೆ ಆಪಾರವಾಗಿರುದರಿಂದ ಜನ-ಜಾನುವಾರುಗಳ ಸಂಬಂಧ ಸದೃಢವಾಗಲಿ ಎಂದು ಖ್ಯಾತ ಪಶುವೈಧ್ಯ ಹಾಗೂ ಬರಹಗಾರ ಡಾ. ಪಿ. ಮನೋಹರ ಉಪಾಧ್ಯ ಹೇಳಿದರು.
ಅವರು ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನ ಕೇಂದ್ರದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ‘ಜನ-ಜಾನುವಾರು’ವಿಷಯದ ಕುರಿತು ಉಪನ್ಯಾಸ ನೀಡಿದರು.
ಕನಕದಾಸ ಸಂಶೋಧನ ಕೇಂದ್ರ ಸಂಯೋಜಕ ಡಾ. ಶಿವರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕೇಂದ್ರದ ಉದ್ದೇಶ ಮತ್ತು ಸಮಕಾಲಿನ ಸನ್ನಿವೇಶದಲ್ಲಿ ಕನಕ ಚಿಂತನೆಯ ಅಗತ್ಯವನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಗಿರಿಧರ ರಾವ್ ಅಧ್ಯಕ್ಷತೆ ವಹಿಸಿದ್ದರು. ಡಾ. ಶ್ರೀಧರ ಮಣಿಯಾಣಿ ಸ್ವಾಗತಿಸಿ, ಪ್ರೋ. ನಂದಕಿಶೋರ್ ವಂದಿಸಿದರು. ಗೌತಮಿ ಕಾರ್ಯಕ್ರಮ ನಿರ್ವಹಿಸಿದರು.