Site icon Ullalavani

ವ್ಯವಹಾರಿಕ ನೆಲೆಯಲ್ಲೇ ಮುಂದುವರಿಯುತ್ತಿರುವ ನಾಗಮಂಡಲೋತ್ಸವಗಳ ಬಗ್ಗೆ ಜಾಗೃತಿ ಅನಿವಾರ್ಯ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಲ್ಯ: ನಾಗಮಂಡಲೋತ್ಸವಗಳು ವ್ಯವಹಾರಿಕ ನೆಲೆಯಲ್ಲೇ ಮುಂದುವರಿಯಲಿದ್ದು ಈ ಬಗ್ಗೆ ಜಾಗೃತಿ ಅನಿವಾರ್ಯ ಎಂದು ಬಾರಕೂರು ಭಾರ್ಗವಬೀಡು ಮಹಾಸಂಸ್ಥಾನಂನ ಶ್ರೀ ಶ್ರೀ ವಿದ್ಯಾವಾಚಸ್ಪತಿ ವಿಶ್ವಸಂತೋಷ ಭಾರತೀ ಶ್ರೀ ಪಾದಂಗಳವರು ಎಚ್ಚರಿಸಿದರು.

ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಪವಿತ್ರ ನಾಗಮಂಡಲೋತ್ಸವ ಮೂರನೇ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಮುಂಬಯಿಯಲ್ಲಿ ನೆಲೆಸಿರುವವರಲ್ಲಿ ಸಾಕಷ್ಟು ಹಣ ಇದೆ ಎನ್ನುವ ನೆಲೆಯಲ್ಲಿ ನಾಗಮಂಡಲೋತ್ಸವ ನಡೆಸಬೇಕಾದರೆ ಮುಂಬಾಯಿಯ ಹಣವೇ ಆಗಬೇಕು ಎನ್ನುವ ಭಾವನೆ ಇತ್ತೀಚಿನ ದಿನಗಳಲ್ಲಿ ಬೇರೂರಿದೆ. ಒಂದೇ ಕುಟುಂಬ ಎರಡು ಕೋಟಿ ಖರ್ಚು ಮಾಡಿ ಆಡಂಭರದ ನಾಗಮಂಡಲೋತ್ಸವ ಮಾಡಿ ಆರ್ಥಿಕ ನಷ್ಟ ಅನುಭವಿಸಿ ವರ್ಷದಲ್ಲೇ ಕೋರ್ಟಿಗೆ ಅಲೆದಾಡುತ್ತಿರುವುದನ್ನು ಕಾಣಬಹುದಾಗಿದೆ. ಕುಟುಂಬದಲ್ಲಿ ತೊಂದರೆ ಬಂದಾಗ ಒಳ್ಳೆಯ ಜ್ಯೋತಿಷ್ಯರಲ್ಲಿ ಸಲಹೆ ಪಡೆಯದೆ ಸಿಕ್ಕ ಸಿಕ್ಕವರಲ್ಲಿ ಸಲಹೆ ಕೇಳಲು ಹೋದರೆ ಆತ ಸಂಪತ್ತಿನ ಲೆಕ್ಕಾಚಾರ ಹಾಕಿ ಇಂತಹ ಸಲಹೆ ನೀಡುತ್ತಾನೆ. ಇದಕ್ಕೆ ಹೊಟೇಲ್, ಕೈಗಾರಿಕೋದ್ಯಮಿಗಳು ಬಲಿಯಾಗುತ್ತಿದ್ದು ಹೀಗೇ ಮುಂದುವರಿದರೆ ಎಂದು ತಿಳಿಸಿದರು.

ಜಗತ್ತಿನ ಸೃಷ್ಟಿಯೇ ನಾಗನಿಂದ ಆಗಿದ್ದು ನಾಗಗಳನ್ನು ಆರಾಧಿಸುವವರು ಮೂಢರು ಎಂದು ಬುದ್ಧಿಜೀವಿಗಳು ಎಂದು ಜರೆಯುತ್ತಾರೆ. ಆದರೆ ಮೆಸಿಪಟಲೋನಿಯ, ಯುರೋಪ್, ರೋಮ್, ಐವೇರಿಯನ್ ದ್ವೀಪ, ಆಫ್ರಿಕಾ, ಮುಂತಾದ ದೇಶಗಳಲ್ಲಿ ಹಿಂದಿನಿಂದಲೂ ನಾಗರಾಧನೆ ನಡೆಯುತ್ತಿದೆ. ಆಸ್ಪ್ರೇಲಿಯಾವೂ ಇದರಿಂದ ಹೊರತಾಗಿಲ್ಲ. ಭಾರತೀಯರು ಮಾತ್ರ ಮೂಢರಾಗಿದ್ದರೆ, ಇತರ ದೇಶದ ಜನ ಮೂಢರೇ ಎಂದು ಪ್ರಶ್ನಿಸಿದ ಅವರು, ಭಾರತದಲ್ಲಿರುವ ನಾಗಲ್ಯಾಂಡ್ ಎನ್ನುವ ರಾಜ್ಯ ನಾಗನಿಂದಲೇ ಹುಟ್ಟಿದ್ದು ಅಲ್ಲಿನ ಜನರನ್ನು ನಾಗರೆಂದೇ ಕರೆಯುತ್ತಾರೆ ಎಂದು ಹೇಳಿದರು.

ಪ್ರಾಣಿ, ಪಕ್ಷಿಗಳು, ಮರಗಳಲ್ಲಿರುವ ಎಲ್ಲಾ ಗುಣಗಳು ಮನುಷ್ಯರಲ್ಲೂ ಇದೆ. ಮನುಷ್ಯ ಧಾರ್ಮಿಕ ಕಾರ್ಯಗಳಿಂದ ವಿಚಲಿತನಾದರೆ ಎಲ್ಲಾ ರೀತಿಯ ಪಾಪ ಕಾರ್ಯಗಳು ನಡೆಯುತ್ತದೆ. ಧಾರ್ಮಿಕ ಕಾರ್ಯಗಳನ್ನು ಆಢಂಬರಕ್ಕೆ ಸೀಮಿತಗೊಳಿಸದೆ ಸಮಾಜ ಬಲಗೊಳಿಸುವ ನೆಲೆಯಲ್ಲಿ ನಡೆಸಿ. ಮನದಲ್ಲಿರುವ ವಿಷ ತೊಡೆದುಹಾಕಿ ಶುದ್ಧ ಮನಸ್ಸು ನಮ್ಮದಾದರೆ ತುಳುನಾಡು ತಿಳಿನಾಡು ಆಗಲು ಸಾಧ್ಯ ಎಂದು ಉಪ್ಪಳ ಕೊಂಡೆಯೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅಭಿಪ್ರಾಯಪಟ್ಟರು.

ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್‍ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಹಾಗೂ ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ವೇದಮೂರ್ತಿ ಜಿ.ಕೆ.ವಿಘ್ನೇಶ್ ಭಟ್ ಶುಭಾಶಂಸನೆ ನೀಡಿದರು. `ದೇಶ-ಧರ್ಮ-ಸಂಸ್ಕøತಿ ರಕ್ಷಣೆಯಲ್ಲಿ ಸಮಾಜದ ಪಾತ್ರ’ ಎಂಬ ವಿಷಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು.

ಮುಂ¨ಯಿಯ ವಿಶ್ವಾಸ್ ಕೆಮಿಕಲ್ಸ್ ಅಧ್ಯಕ್ಷ ಬಿ.ವಿವೇಕ್ ಶೆಟ್ಟಿ, ಅಖಿಲ ಭಾರತ ಬಿಲ್ಲವ ಏಕೀಕರಣ ಸಮಿತಿ ಅಧ್ಯಕ್ಷ ರವಿಪುಜಾರಿ ಚಿಲಿಂಬಿ, ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಭಂಡಾರಿ ಮಹಾಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ದೇರಳಕಟ್ಟೆ ವಿದ್ಯಾರತ್ನ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ, ಸಿವಿಲ್ ಇಂಜಿನಿಯರ್ ರಂಗನಾಥ ಐತಾಳ್, ಪದ್ಮಶ್ರೀ ಹೊಟೇಲ್ ಮಾಲೀಕ ಮುರಳೀಧರ ಉಡುಪ, ಕಲ್ಲಡ್ಕ ಲಕ್ಷ್ಮೀಗಣೇಶ ಹೊಟೇಲ್ ಮಾಲೀಕ ರಾಜೇಂದ್ರ ಎನ್.ಹೊಳ್ಳ ಮುಖ್ಯ ಅತಿಥಿಗಳಾಗಿದ್ದರು. ದೇರಳಕಟ್ಟೆ ಶ್ರೀ ಅಯ್ಯಪ್ಪ ದೇವಸ್ಥಾನದ ಅಧ್ಯಕ್ಷ ಸೀತಾರಾಮ ಶೆಟ್ಟಿ ನೆತ್ತಿಲಬಾಳಿಕೆ, ಕಿನ್ಯಾ ಬೆಳರಿಂಗೆ ಶ್ರೀ ಮಲರಾಯ ಧೂಮಾವತಿ ದೈವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಸಾಮಾನಿ ಸಾಂತ್ಯಗುತ್ತು, ಕೊಲ್ಯ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಪ್ರವೀನ್ ಕುಜುಮಗದ್ದೆ ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ಕಡಂಬೋಡಿ ಮಹಾಬಲ ಪೂಜಾರಿ, ಧರ್ಮದರ್ಶಿ ಬಾಸ್ಕರ ಐತಾಳ್, ಗೌರವ ಅಧ್ಯಕ್ಷ ಕೆ.ಜಯರಾಮ ಶೆಟ್ಟಿ, ಕಾರ್ಯಾಧ್ಯಕ್ಷ ಸುಶಾಂತ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

ಸಮಿತಿಯ ಸಂಘಟನಾ ಪ್ರ.ಕಾ. ಮೋಹನ್‍ದಾಸ್ ಶೆಟ್ಟಿ ನೆತ್ತಿಲ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ರವೀಂದ್ರನಾಥ ಪೂಂಜ ವಂದಿಸಿದರು. ತೋನ್ಸೆ ಪುಷ್ಕಳ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Exit mobile version