Site icon Ullalavani

ಸಿಸಿಬಿ ಪೊಲೀಸರಿಂದ ಸಹಾಯಧನ ಹಸ್ತಾಂತರ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

 

ಮಂಗಳೂರು: ಆಗಸ್ಟ್ 18ರಂದು ಕರ್ತವ್ಯದಲ್ಲಿದ್ದ ವೇಳೆ ಆಕಸ್ಮಿಕವಾಗಿ ದುರಂತ ಸಾವಿಗೀಡಾದ ಪೊಲೀಸ್ ಸಿಬ್ಬಂದಿ ಗಣೇಶ್.ಎಂ.ಪಿ ರವರ ಮಕ್ಕಳಾದ ಅಖಿಲ್ ಮತ್ತು ಅನುರಚನಾ ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಿಸಿಬಿ ಪೋಲೀಸರ ವತಿಯಿಂದ ತಲಾ 50,0000 ರೂಪಾಯಿ ಸಹಾಯಧನವನ್ನು ಸಿಸಿಬಿ ಅಧಿಕಾರಿ ವೆಲೆಂಟಿನ್ ಡಿ’ಸೋಜ ಹಸ್ತಾಂತರಿಸಿದರು.


ಗಣರಾಜ್ಯೋತ್ಸವ ದಿನದ ಅಂಗವಾಗಿ ಮಂಗಳೂರಿನ ಸಿ.ಸಿಬಿ ಕಚೇರಿಯಲ್ಲಿ ಸಿಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಸಮ್ಮುಖದಲ್ಲಿ ಸಹಾಯಧನವನ್ನು ಹಸ್ತಾಂತರಿಸಲಾಯಿತು.

Exit mobile version