ಹೈದರಾಬಾದ್: ಮಲಯಾಳಂನ ಖ್ಯಾತ ಕಲಾವಿದೆ ಹಾಗೂ ಪೋಷಕ ನಟಿ ಕಲ್ಪನಾ ರಂಜನಿ ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.
ಮೇಲ್ನೋಟಕ್ಕೆ ಹೃದಯಾಘಾತಕ್ಕೆ ಒಳಗಾಗಿ ನಟಿ ಕಲ್ಪನಾ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದ್ದು ಅವರಿಗೆ 51 ವರ್ಷ ವಯಸ್ಸಾಗಿತ್ತು. ತೆಲುಗು ಚಿತ್ರವೊಂದರ ಚಿತ್ರೀಕರಣದ ನಿಮಿತ್ತ ಹೈದರಾಬಾದಿನ ಖಾಸಗಿ ಹೊಟೆಲ್ ನಲ್ಲಿ ನಟಿ ಕಲ್ಪನಾ ಅವರು ಉಳಿದುಕೊಂಡಿದ್ದರು. ಇಂದು ಬೆಳಗ್ಗೆ ಕೊಠಡಿಯ ಬಾಗಿಲು ತೆಗೆದಾಗ ಕಲ್ಪನಾ ಅವರು ಪ್ರಜ್ಞೆತಪ್ಪಿ ಕೆಳಗೆ ಬಿದ್ದಿದ್ದರು. ಇದರಿಂದ ಗಾಬರಿಯಾದ ಸಿಬ್ಬಂದಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಕಲ್ಪನಾ ಅವರ ಸಾವಿನ ಸುದ್ದಿಯಿಂದಾಗಿ ಮಲಿಯಾಳಂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ಅಂತಿಮ ವಿಧಿವಿಧಾನದ ಕುರಿತು ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.