Site icon Ullalavani

ಹೈದರಾಬಾದ್ ವಿವಿ ದಲಿತ ವಿದ್ಯಾರ್ಥಿ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಯಬೇಕು

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ: ಹೈದರಾಬಾದ್ ವಿವಿ ದಲಿತ ಹೈದರಾಬಾದ್ ವಿವಿ ದಲಿತ ವಿದ್ಯಾರ್ಥಿ ರೋಹಿತ್ ರೋಹಿತ್ ಮೇಮುಲರವರ ಸಾವಿಗೆ ಜಾತಿ ಮತ ಬೇಧ ಬಿಟ್ಟು ದೇಶದಾದ್ಯಂತ ಕ್ಯಾಂಪಸ್‍ಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುವ ಮೂಲಕ ರೋಹಿತ್ ಸಾವಿಗೆ ಸಂತಾಪ ವ್ಯಕ್ತಪಡಿಸುತ್ತಿದ್ದು, ರೋಹಿತ್ ಸಾವು ನಿರರ್ಥಕವಾಗದೆ ಈ ದೇಶದ ಸಾಮಾಜಿಕ ನ್ಯಾಯದ ಸ್ಥಾಪನೆಗೆ ಪೂರಕವಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಂ.ಟಿ. ಉಮೇಶ್‍ಚಂದ್ರ ಅಭಿಪ್ರಾಯಪಟ್ಟರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‍ನ ಆಡಳಿತ ಕಚೇರಿ ಎದುರು ವಿ.ವಿ. ಎಸ್‍ಸಿಎಸ್‍ಟಿ ಸ್ನಾತಕೋತ್ತರ ಹಾಗೀ ಸಂಶೋಧನಾ ವಿದ್ಯಾರ್ಥಿಗಳು, ಅಧ್ಯಾಪಕ ಮತ್ತು ಅಧ್ಯಾಪಕೇತರ ನೌಕರರು ಹಾಗೂ ಪ್ರಗತಿಪರ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಹೈದರಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ಮೇಮುಲರವರ ಅಸಹಜ ಸಾವಿನ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಹಿಂದೆ ಹಿಂದೆ ಕೈರ್ಲಾಂಜಿಯಲ್ಲಿ, ಕಂಬಾಲಪಲ್ಲಿಯಲ್ಲಿ ದಲಿತರ ವಿರುದ್ಧ ಅನ್ಯಾಯ, ಅತ್ಯಾಚಾರವಾದಾಗ ಇಷ್ಟು ದೊಡ್ಡ ಮಟ್ಟಿನ ಪ್ರತಿಭಟನೆ ನಡೆದಿರಲಿಲ್ಲ. ಮೇಲ್ವರ್ಗದ ಜನರ ಮೇಲೆ ಅತ್ಯಾಚಾರ ನಡೆದಾಗ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿದೆ. ಅದೇ ಮಾದರಿಯಲ್ಲಿ ರೋಹಿತ್ ಸಾವಿಗೆ ಸಂತಾಪ ಸೂಚಿಸಿ ಉನ್ನತ ಮಟ್ಟದ ತನಿಖೆ ಆಗ್ರಹಿಸಿ ಪ್ರತಿಭಟನೆ ನಡೆಯುವ ಮೂಲಕ ನಿರ್ಭಯ ಅತ್ಯಾಚಾರ ಪ್ರಕರಣದ ಸಂದರ್ಭದಲ್ಲಿ ಸಿಕ್ಕಂತಹ ಬೆಂಬಲ ರೋಹಿತ್ ಸಾವಿನ ಸಂದರ್ಭದಲ್ಲಿ ಸಿಗುತ್ತಿರುವುದು ನಿಜವಾದ ದೇಶಪ್ರೇಮವಾಗಿದ್ದು ದೇಶದಾದ್ಯಂತ ಚಳುವಳಿ ಪ್ರಾರಂಭವಾಗುವ ಸಾಮಾಜಿಕ ನ್ಯಾಯದ ಉಳಿವಿಗೆ ನಾಂದಿಯಾಗಬೇಕು ಎಂದರು.

ಪ್ರತಿಭಟನೆಯ ಪೂರ್ವಭಾವಿಯಾಗಿ ಆಡಳಿತ ಸೌಧವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು ಪ್ರತಿಭಟನೆಯಲ್ಲಿ ಮನವಿಯನ್ನು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಟಿ.ಡಿ. ಕೆಂಪರಾಜು ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಉದ್ಯೋಗಿಗಳ ಸಂಘದ ಅಧ್ಯಕ್ಷ  ಪ್ರೊ ವಿಶ್ವನಾಥ್, ಉಪಾಧ್ಯಕ್ಷ ಮೋಹನಾಂಗಯ್ಯ , ಕಾರ್ಯದರ್ಶಿ ಮೋಹನ್ ಸಿಂಘೆ, ಪರೀಕ್ಷಾಂಗ ವಿಭಾಗದ ವಿಶೇಷ ಅಧಿಕಾರಿ ಡಾ| ಪ್ರಶಾಂತ್ ನಾಯಕ್, ನಿವೃತ್ತ ಪ್ರಾಧ್ಯಾಪಕ ಭೂಮಿಗೌಡ, ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ| ಸಬಿಹಾ ಭೂಮಿಗೌಡ, ಸಂಶೋಧನಾ ವಿದ್ಯಾರ್ಥಿ ಹರೀಶ್, ಪ್ರಗತಿಪರ ಸಂಘಟನೆಯ ಇಸ್ಮತ್ ಪಜೀರು, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಆಲಿ, ಸದಸ್ಯ ನಝರ್ ಷಾ ಪಟ್ಟೋರಿ, ಬಾಳೆಪುಣಿ ಪಂಚಾಯತ್ ಸದಸ್ಯರಾದ ನಾಸಿರ್ ನಡುಪದವು, ಜಲೀಲ್ ಮತ್ತಿತರರು ಉಪಸ್ಥಿತರಿದ್ದರು.

Exit mobile version