Site icon Ullalavani

ವಿವಿ ಯುವಜನೋತ್ಸವ `ವೇವ್ಸ್’-2015ರ ಸಮಾರೋಪ ಸಮಾರಂಭ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ : ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಳೆದ ಐದು ದಿನಗಳಿಂದ ನಡೆದ 31ನೆಯ ದಕ್ಷಿಣ ವಲಯ ಅಂತರ್ ವಿವಿ ಯುವಜನೋತ್ಸವ `ವೇವ್ಸ್’-2015ರಲ್ಲಿ ಕೇರಳದ ವಿ.ವಿ.ಗಳು ಪಾರಮ್ಯ ಮೆರೆದಿದ್ದು, ತಿರುವನಂತಪುರದ ಯುನಿವರ್ಸಿಟಿ ಆಫ್ ಕೇರಳ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ ಕೊಟ್ಟಾಯಂನ ಮಹಾತ್ಮಾಗಾಂ„ ವಿಶ್ವವಿದ್ಯಾಲಯ ರನ್ನರ್ ಅಪ್ ಪಡೆದುಕೊಂಡು ಫೆಬ್ರವರಿಯಲ್ಲಿ ಮೈಸೂರಿನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದೆ.

ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ. ಕೆ. ಭೈರಪ್ಪ ಮಾತನಾಡಿ ಮಂಗಳೂರು ಸಂಸ್ಕ ೃತಿಯ ನೆಲವಾಗಿದ್ದು ಯುವಜನೋತ್ಸವದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಎಲ್ಲ ರಂಗದಲ್ಲಿ ತೊಡಗಿಸಕೊಳ್ಳಲು ಸಹಾಯವಾಗುತ್ತದೆ. ಹಾಗಾಗಿ ಇಂತಹ ವೇದಿಕೆಯಲ್ಲಿ ಪಾಲುಪಡೆಯುವ ಅವಕಾಶಕ್ಕಾಗಿ ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಬೇಕು .

ಯುವಜನೋತ್ಸವದ ಯಶಸ್ವಿ ಆಯೋಜನೆಯಿಂದ ಮಂಗಳೂರು ವಿವಿಯ ಕೀರ್ತಿ ಶಿಖರಕ್ಕೇರಿದೆ. ಯುವಜನೋತ್ಸವ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ತೈವಾನ್‍ನಲ್ಲಿ ನಡೆದ ಅಂತರಾಷ್ಟಿ ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಅನಿವಾರ್ಯತೆ ಇದ್ದುದರಿಂದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು.

ಮಂಗಳೂರು ವಿವಿಯಲ್ಲಿ ಈಗಾಗಲೇ ಸಾಂಸ್ಕ ೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ನಿಧಿಯನ್ನು ಹೆಚ್ಚಿಸಲಾಗಿದೆ. ಎನ್‍ಸಿಸಿ, ಎನ್‍ಎಸ್‍ಎಸ್, ಕ್ರೀಡೆ ಸೇರಿದಂತೆ ಸಾಂಸ್ಕ ೃತಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ ಎಂದರು.

ದಕ್ಷಿಣ ವಲಯ ಅಂತರ್‍ವ ವಿವಿ ಯುವಜನೋತ್ಸವ ಮುಖ್ಯ ವೀಕ್ಷಕ ಪ್ರೊ. ಅರುಣ್ ಪಾಟೀಲ್ ಮಾತನಾಡಿ ಪ್ರಶಸ್ತಿ ಪಡೆಯಲು ಅಸಾಧ್ಯವಾದ ತಂಡಗಳು ತಾವು ಸ್ಪರ್„ಸಿದ ಕ್ಷೇತ್ರದಲ್ಲಿ ಇನ್ನಷ್ಟು ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದರು.

ಮಂಗಳೂರು ವಿವಿ ಕುಲಸಚಿವ ಪ್ರೊ. ಟಿ.ಡಿ. ಕೆಂಪರಾಜು ಮಾತನಾಡಿದರು. ಟೀಂ ಲೀಡರ್‍ಗಳ ಪರವಾಗಿ ಕಲ್ಲಿಕೋಟೆ ವಿಶ್ವವಿದ್ಯಾಲಯದ ವತ್ಸಲರಾಜ್ ಹಾಗೂ ಮೈಸೂರು ವಿವಿಯ ಪ್ರೊ. ಗುರುಸಿದ್ದಯ್ಯ, ವಿದ್ಯಾರ್ಥಿಗಳ ಪರವಾಗಿ ಹೈದರಾಬಾದಿನ ಜವಾಹರ್‍ಲಾಲ್ ನೆಹರೂ ತಾಂತ್ರಿಕ ವಿಶ್ವವಿದ್ಯಾಲಯದ ಎಂ.ಟೆಕ್ ವಿದ್ಯಾರ್ಥಿ ಉಮಾಶಂಕರ್, ತಿರುವನಂತಪುರದ ಕೇರಳ ವಿಶ್ವವಿದ್ಯಾಲಯದ ಹರಿಕೃಷ್ಣನ್ ಮೆನನ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ವೇವ್ಸ್-2015 ಫಲಿತಾಂಶ
ಮ್ಯೂಸಿಕ್: ಯುನಿವರ್ಸಿಟಿ ಆಫ್ ಕೇರಳ ತಿರುವನಂತಪುರಂ, ಡ್ಯಾನ್ಸ್ : ಮೈಸೂರು ವಿಶ್ವವಿದ್ಯಾಲಯ ಮೈಸೂರು, ಲಿಟರಲ್: ಅಮೃತ ವಿದ್ಯಾಪೀಠಂ ಕೊಯಂಬತ್ತೂರು ,ನಾಟಕ: ಅಮೃತ ವಿದ್ಯಾಪೀಠಂ ಕೊಯಂಬತ್ತೂರು,ಫೈನ್ ಅಟ್ರ್ಸ್: ಯೂನಿವರ್ಸಿಟಿ ಆಫ್ ಕೇರಳ ತಿರುವನಂತಪುರಂ
ಸಾಂಸ್ಕ ೃತಿಕ ಮೆರವಣಿಗೆ : 1. ಮೈಸೂರು ವಿಶ್ವವಿದ್ಯಾಲಯ 2. ಕಾಲಡಿ ಶ್ರೀ ಶಂಕರಾಚಾರ್ಯ ಸಂಸ್ಕ ೃತ ವಿವಿ ಕೇರಳ 3. ಮಂಗಳೂರು ವಿಶ್ವವಿದ್ಯಾಲಯ
ಚಾಂಪಿಯನ್ : ಯುನಿವರ್ಸಿಟಿ ಆಫ್ ಕೇರಳ ತಿರುವನಂತಪುರಂ ,ರನ್ನರ್ ಆಪ್: ಮಹಾತ್ಮಾಗಾಂ„ ವಿಶ್ವವಿದ್ಯಾಲಯ ವಿ ಕೊಟ್ಟಾಯಂ ಪಡೆದುಕೊಂಡಿತು.
ಮಂಗಳೂರು ವಿವಿಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ, ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ಪ್ರೊ. ಪಿ.ಎಲ್. ಧರ್ಮ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ. ರವಿಶಂಕರ್ ಕಾರ್ಯಕ್ರಮ ನಿರ್ವಹಿಸಿದರು. ಇತಿಹಾಸ ವಿಭಾಗ ಪ್ರಾಧ್ಯಾಪಕ ಪ್ರೊ. ಲೋಕೇಶ್ ವಂದಿಸಿದರು.

Exit mobile version