ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಇಸ್ಲಾಂ ಧರ್ಮದ ಸಿದ್ಧಾಂತಗಳನ್ನು ಅನುಕರಣೆ ಮಾಡಿ ಪ್ರವಾದಿಯವರ ಉಪದೇಶಗಳನ್ನು ಸಮುದಾಯದತ್ತ ತಲುಪಿಸುವ ಕಾರ್ಯ ನಾವು ಮಾಡಬೇಕು. ಮುಸ್ಲಿಮರು ದಾರಿ ತಪ್ಪದಂತೆ ಅವರಿಗೆ ಶಿಕ್ಷಣ ಒದಗಿಸಿಕೊಡುವ ವ್ಯವಸ್ಥೆಯನ್ನು ಎಸ್‍ವೈಎಸ್ ವತಿಯಿಂದ ಆಗಬೇಕು ಎಂದು ಡಿ.ಕೆ. ಉಮ್ಮರ್ ಸಖಾಫಿ ಹೇಳಿದರು.
ಎಸ್‍ವೈಎಸ್ ದೇರಳಕಟ್ಟೆ ಸೆಂಟರ್ ಅಧ್ಯಕ್ಷ ಏಷ್ಯನ್ ಬಾವ ಹಾಜಿ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಎಸ್‍ವೈಎಸ್ ಕಾರ್ಯದರ್ಶಿ ಸಿದ್ದೀಕ್ ಸಖಾಫಿ ಮೂಳೂರು ಕಾರ್ಯಕ್ರಮ ಉದ್ಘಾಟಿಸಿದರು. ಸುರಿಬೈಲ್ ದಾರುಲ್ ಅಶ್-ಅರಿಯ್ಯಾ ಮೆನೇಜರ್ ಮುಹಮ್ಮದಾಲಿ ಸಖಾಫಿ ವಿಚಾರ ಮಂಡನೆ ಮಾಡಿದರು.
ವಿ.ಯು. ಇಸ್ಹಾಕ್ ಝುಹ್‍ರಿ ಕಾನೆಕೆರೆ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು. ಸಯ್ಯಿದಲವಿ ತಂಙಳ್ ಕಿನ್ಯ ಅತಿಥಿಗಳನ್ನು ಸ್ವಾಗತಿಸಿದರು. ಇಸ್ಮಾಯಿಲ್ ಕಿನ್ಯ ವಂದಿಸಿದರು.