ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ದೇಶದ ಎಲ್ಲ ಬೃಹತ್ ಸಂಸ್ಥೆಗಳು ಕಂಪ್ಯೂಟರ್ ಅಂತರ್ಜಾಲ ಮತ್ತು ಮೊಬಿಲಿಟಿಯನ್ನೇ ಅವಲಂಬಿಸಿದ್ದು ಆಂಡ್ರಾಯಿಡ್ ಕ್ಷೇತ್ರದಲ್ಲಿ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳು ನೂತನ ಅವಿಷ್ಕಾರ ಮಾಡಲು ವಿಫುಲ ಅವಕಾಶಗಳಿವೆ ಎಂದು ಮಂಗಳೂರು ನೋವಿಗೋಸೊಲ್ಯೂಷನ್ಸ್‍ನ ಮುಖ್ಯಾಧಿಕಾರಿ ಮತ್ತು ನಿರ್ದೇಶಕ ಪ್ರವೀಣ್ ಕಲ್ಬಾವಿ ಹೇಳಿದರು.
ವಿದ್ಯಾರ್ಥಿಗಳು ತಾವು ಹೇಗೆ ಬುದ್ಧಿವಂತರಾಗಬೇಕೆಂಬು ಎಂಬುವುದನ್ನು ಧೃಢಪಡಿಸಿಕೊಳ್ಳಿ. ಆಂಡ್ರಾಯಿಡ್ ಅಪ್ಲಿಕೇಶನ್‍ನ ಬಗ್ಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ದೊರಕಬೇಕಾದ ಆವಶ್ಯಕತೆ ಇದ್ದು ಆ ನಿಟ್ಟಿನಲ್ಲಿ ಕಾಲೇಜು ಆಡಳಿತ ಏರ್ಪಡಿಸಿದ ಕಾರ್ಯಗಾರವು ಅರ್ಥಪೂರ್ಣ ಎಂದು ಹೇಳಿದರು.
ಶಶಾಂಕ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಮುಖ್ಯಸ್ಥರಾದ ಅಬ್ದುಲ್ಲಾ ಇಬ್ರಾಹಿಂ ಪಿ. ಎ, ಬ್ಯುಸಿನೆಸ್ ಡೆವಲಪ್‍ಮೆಂಟ್ ವಿಭಾಗದ ನಿರ್ದೇಶಕ ಶಿಹಾಬ್ ಕಲಂದರ್, ಪ್ರಾಂಶುಪಾಲ ಡಾ. ಅಬ್ದುಲ್ ಶರೀಫ್, ಉಪ ಪ್ರಾಂಶುಪಾಲ ಡಾ. ರಮೀಸ್ ಎಮ್.ಕೆ, ಕಂಪ್ಯೂಟರ್ ಸಾಯನ್ಸ್ ವಿಭಾಗದ ಮುಖ್ಯಸ್ಥೆ ಡಾ. ಶರ್ಮಿಳಾ ಹಾಗೂ ಅಕಾಡೆಮಿಕ್ಸ್ ವಿಭಾಗ ನಿರ್ದೇಶಕ ಪ್ರೊ. ಸರ್ಫಾಝ್ ಹಾಸಿಮ್ ಉಪಸ್ಥಿತರಿದ್ದರು.