ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ತೊಕ್ಕೊಟ್ಟಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ತೊಕ್ಕೊಟ್ಟುವಿನಿಂದ ಒಳಪೇಟಯ ಓವರ್ ಬ್ರಿಡ್ಜ್ ಬಳಿಯ ಯು.ಎಸ್.ಕಾಂಪ್ಲೆಕ್ಸ್‍ಗೆ ಸ್ಥಳಾಂತರಗೊಂಡ ಶಾಖೆಯನ್ನು ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ ಉದ್ಘಾಟಿಸಿದರು.
ಉಪ ಮಹಾ ಪ್ರಧಾನ ವ್ಯವಸ್ಥಾಪಕ ಸತೀಶ್ .ಎಂ ಸ್ವಾಗತಿಸಿದರು.
ಕಟ್ಟಡದ ಮಾಲಕಿ ಪ್ರಭಾವತಿ ಹಾಗೂ ಶಾಖಾ ವ್ಯವಸ್ಥಾಪಕ ರಾಧಾಕೃಷ್ಣ .ಎಂ.ಜೆ ಅವರನ್ನು ಸನ್ಮಾನಿಸಲಾಯಿತು.
ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಶ್ವನಾಥ ನಾಯರ್ ಸ್ವಾಗತಿಸಿ ವಂದಿಸಿದರು.