Site icon Ullalavani

ಮಿಮಿಕ್ರಿ ಮತ್ತು ಮೈಮ್ ಸ್ಪರ್ಧೆಯಲ್ಲಿ ಗಮನ ಸೆಳೆದ ವಿವಿ ಯುವಜನೋತ್ಸವ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ:  ಮಂಗಳೂರು ವಿಶ್ವವಿದ್ಯಾನಿಲಯದ ಆತಿಥ್ಯದಲ್ಲಿ ಮಂಗಳಗಂಗೋತ್ರಿ ಕ್ಯಾಂಪಸ್‍ನಲ್ಲಿ ನಡೆಯುತ್ತಿರುವ 31ನೆಯ ದಕ್ಷಿಣ ವಲಯ ಅಂತರ್ ವಿವಿ ಯುವಜನೋತ್ಸವ `ವೇವ್ಸ್-2015’ನ ಸ್ಪರ್ದೆಯ ಪ್ರಥಮ ದಿನವಾದ ಬುಧವಾರ ಮಿಮಿಕ್ರಿ ಮತ್ತು ಮೈಮ್ ಸೇರಿದಂತೆ ವಿವಿಧ ಸ್ಪರ್ಧೆಗಳು ಗಮನ ಸೆಳೆಯಿತು.
ಕ್ಯಾಂಪಸ್‍ನ ಪ್ರಮುಖ ವೇದಿಕೆಯಾದ ಮಂಗಳಾ ಆಡಿಟೋರಿಯಂನ ಡಾ| ಶಿವರಾಮ ಕಾರಂತ ವೇದಿಕೆಯಲ್ಲಿ ಮಿಮಿಕ್ರಿ ಮತ್ತು ಮೈಮ್ ಸ್ಪರ್ಧೆ ನಡೆದರೆ, ಡಾ| ಕಯ್ಯಾರ ಕಿಂಜಣ್ಣ ರೈ ವೇದಿಕೆಯಲ್ಲಿ ಪಾಶ್ಚಾತ್ಯ ಮತ್ತು ಭಾರತೀ ಸಮೂಹ ಗಾನ ಸ್ಪರ್ಧೆ ನಡೆಯಿತು. ವಿe್ಞÁನ ಸಂಕೀರ್ಣದ ಗಿರಿಬಾಲೆ ವೇದಿಕೆಯಲ್ಲಿ ಹಿಂದುಸ್ಥಾನಿ ಮತ್ತು ಕರ್ನಾಟಿಕ್ ಶಾಸ್ತ್ರೀಯ ಗಾಯನ , ತಾಳವಾದ್ಯ ಸ್ಪರ್ಧೆ ನಡೆಯಿತು.

ಹಳೆ ಸೆನೆಟ್ ಸಭಾಂಗಣದ ಪಂಜೆ ಮಂಗೇಶರಾಯ ವೇದಿಕೆಯಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆದರೆ ಮಾನವಿಕ ಮತ್ತು ಯೋಗಿಕ್ ಸೈನ್ಸ್ ಬ್ಲಾಕ್‍ನ ಬಿ.ಎಂ. ಇದಿನಬ್ಬ ವೇದಿಕೆಯಲ್ಲಿ ಸ್ಪಾಟ್ ಪೈಂಟಿಂಗ್ ಮತ್ತು ಸ್ಪಾಟ್ ಫೋಟೋಗ್ರಾಫಿ ಸ್ಪರ್ಧೆ ನಡೆಯಿತು.

ಕ್ವಿಜ್ ಕೇರಳಕ್ಕೆ ಪ್ರಶಸ್ತಿ : ಸ್ಪರ್ಧೆಯ ಎಲ್ಲಾ ವಿಜೇತರ ವಿವರ ಸಮಾರೋಪ ದಿನದಂದು ಪ್ರಕಟವಾಗಲಿದ್ದು, ಆದರೆ ಕ್ವಿಝ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕೇರಳದ ಕಣ್ಣೂರು ವಿ.ವಿ. ಮತ್ತು ದ್ವಿತೀಯ ಸ್ಥಾನವನ್ನು ಸೆಂಟ್ರಲ್ ವಿ.ವಿ. ಆಫ್ ಕೇರಳ ಪಡೆದುಕೊಂಡಿದೆ.

31ಯುವಜನೋತ್ಸವದಲ್ಲೂ ಭಾಗವಹಿಸಿದ ಅನುಭವ : ನವದೆಹಲಿಯ ಎಐಯುನ ಸಹ ಕಾರ್ಯದರ್ಶಿ ಡಾ| ಸ್ಯಾಮ್ಸನ್ ಡೇವಿಡ್ ಅವರು ದಕ್ಷಿಣವಲಯ ಅಂತರ್ ವಿ.ವಿ.ಯ ಎಲ್ಲಾ 31 ಯುವಜನೋತ್ಸವದಲ್ಲೂ ಭಾಗವಹಿಸಿದ್ದು, ಈ ಬಾರಿಯ ಯುವಜನೋತ್ಸವದಲ್ಲಿ ಸಂಘಟಕರೂ ಆಗಿದ್ದು, ತೀರ್ಪುಗಾರರಾಗಿಯೂ ಭಾಗವಹಿಸಿದ್ದಾರೆ ದೇಶದಾದ್ಯಂತ ನಡೆದ ಎಲ್ಲಾ ಯುವಜನೋತ್ಸವದ ಛಾಯಾಚಿತ್ರಗಳನ್ನು ತಮ್ಮ ವೆಬ್‍ಸೈಟ್ www.sampsondavidyouth.comನಲ್ಲಿ ಪ್ರಕಟಿಸಿದ್ದಾರೆ.

ವೇವ್ಸ್ -2015ರ ಎರಡನೇ ದಿನವಾದ ಗುರುವಾರ ಪ್ರಹಸನ, ಏಕಾಂಕಿ ನಾಟಕ, ಜನಪದ ನೃತ್ಯ, ಪಾಶ್ಚಾತ್ಯ ಮತ್ತು ಭಾರತೀಯ ಗಾಯನ ಸ್ಪರ್ಧೆ, ಚರ್ಚಾ ಸ್ಪರ್ಧೆ, ಪೋಸ್ಟರ್ ತಯಾರಿಕೆ, ವ್ಯಂಗ್ಯಚಿತ್ರ ಸ್ಪರ್ಧೆ ನಡೆಯಲಿದೆ.

Exit mobile version