Site icon Ullalavani

ಉಳ್ಳಾಲ ನಗರಸಭೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ : ನೂತನ ಸ್ಥಾಯಿ ಸಮಿತಿ ಅಧ್ಯಕ್ಷರ ಜತೆಗೆ ಸೇರಿಕೊಂಡು ಪೌರಾಯುಕ್ತರು ಹಾಗೂ ಸಿಬ್ಬಂದಿ ವರ್ಗ ಸೌಹಾರ್ದತೆಯಿಂದ ಕರ್ತವ್ಯ ನಿರ್ವಹಿಸಿ ಉಳ್ಳಾಲವನ್ನು ಸುಂದರ, ಸ್ವಚ್ಛವಾಗಿ ರೂಪಿಸಲು ಶ್ರಮಿಸುವೆವು ಎಂದು ನಗರಸಭೆ ಅಧ್ಯಕ್ಷೆ ಎಂ.ಗಿರಿಜಾ ಬೈ ಹೇಳಿದ್ದಾರೆ.

ಅವರು ಉಳ್ಳಾಲನಗರಸಭೆಯಲ್ಲಿ ಸೋಮವಾರ ಜರಗಿದ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ ಫತ್ತಾಕ್ ಅವರಿಗೆ ನಡೆದ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಅಲ್ಲೇ ಸರಿಪಡಿಸಿ ತಪ್ಪಿಹೋಗಲು ಅವಕಾಶ ಕೊಡದೆ ಉತ್ತಮ ಮಾರ್ಗದರ್ಶನದ ಜತೆಗೆ ಬಾಕಿಯಿರುವ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಲು ಶಕ್ತಿ ಮೀರಿ ಪ್ರಯತ್ನಿಸೋಣ ಎಂದರು.

ನಗರಸಭೆ ಸದಸ್ಯ ಮುಸ್ತಾಫ ಅಬ್ದುಲ್ಲಾ ಮಾತನಾಡಿ ನಗರಸಭೆಯ 27 ಸದಸ್ಯರು ಜತೆಗಿದ್ದೇವೆ. ಬೇಕಾದ ಅನುದಾನವನ್ನು ಉಳ್ಳಾಲಕ್ಕೆ ಸಚಿವರು ತರುತ್ತಲೇ ಇದ್ದು, ಅದರ ವಿನಿಯೋಗವನ್ನು ಎಲ್ಲರೂ ಮಾಡುವುದರ ಜತೆಗೆ , ಸ್ಥಾಯಿ ಸಮಿತಿ ಅಧ್ಯಕ್ಷರ ಗೌರವ ನೀಡುವುದರೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಈ ಸಂದರ್ಭ ಉಪಾಧ್ಯಕ್ಷೆ ರಝಿಯಾ ಇಬ್ರಾಹಿಂ, ಪೌರಾಯುಕ್ತೆ ರೂಪಾ.ಟಿ.ಶೆಟ್ಟಿ, ಸದಸ್ಯರಾದ ಮುಸ್ತಾಭ ಅಬ್ದುಲ್ಲಾ, ಫಾರುಕ್ ಉಳ್ಳಾಲ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಮುಕ್ಕಚ್ಚೇರಿ, ವಿರೋಧ ಪಕ್ಷದ ನಾಯಕಿ ಮಹಾಲಕ್ಷ್ಮಿ, ಮಂಡಲ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎ.ಕೆ.ಮೊಯ್ದೀನ್, ಪೊಡಿಮೋನು ಇಸ್ಮಾಯಿಲ್, ಹನೀಫ್ ಕೋಟೆಪುರ, ಸುಕುಮಾರ್, ಯು.ಪಿ. ಅಯ್ಯೂಬ್, ಅಹಮದ್ ಬಾವಾ ಕೊಟ್ಟಾರ, ಸುಂದರ ಉಳಿಯ, ಯು.ಹೆಚ್ ಫಾರುಕ್, ಮೊದಲಾದವರು ಉಪಸ್ಥಿತರಿದ್ದರು.

Exit mobile version