ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಕಲೆಯ ಕುರಿತು ಸಂರಕ್ಷಣೆ, ಸಂವರ್ಧನ, ಅಧ್ಯಯನಗಳು ಆಗಬೇಕಿದ್ದು, ಸಾಂಸ್ಕøತಿಕ ನೀತಿಗಳ ಜಾರಿ ಹಾಗೂ ಬದಲಾವಣೆ ವಿಶ್ವವಿದ್ಯಾನಿಲಯಗಳಿಂದ ಆಗಬೇಕಿದೆ ಎಂದು ಯಕ್ಷಗಾನ ವಿದ್ವಾಂಸ ಪ್ರೊ. ಎಂ. ಪ್ರಭಾಕರ ಜೋಶಿ ಹೇಳಿದರು.
ಅವರು ಸೋಮವಾರ ನವದೆಹಲಿಯ ಅಸೋಸಿಯೇಟ್ ಆಫ್ ಇಂಡಿಯನ್ ಯುನಿವರ್ಸಿಟಿ (ಎಐಯು) ಹಾಗೂ ಕೇಂದ್ರ ಯುವಜನಸೇವೆ ಮತ್ತು ಕ್ರೀಡಾ ಸಚಿವಾಲಯದ ಸಹಯೋಗದಲ್ಲಿ ಕೊಣಾಜೆಯ ಮಂಗಳೂರು ವಿವಿಯ ಆತಿಥ್ಯದಲ್ಲಿ ಮಂಗಳಗಂಗೋತ್ರಿಯ ಕ್ಯಾಂಪಸ್‍ನ ಮಂಗಳ ಸಭಾಂಗಣದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ 31ನೆಯ ದಕ್ಷಿಣ ವಲಯ ಅಂತರ್ ವಿವಿ ಯುವಜನೋತ್ಸವ `ವೇವ್ಸ್-2015’ಗೆ ಚಾಲನೆ ನೀಡಿ ಮಾತನಾಡಿದರು.
ಯುವಜನಾಂಗ ಕಲೆ ಹಾಗೂ ಸಂಸ್ಕøತಿಯಿಂದ ಹಿಂದೆ ಸರಿಯುತ್ತಿದೆ ಅನ್ನುವ ಮಾತು ಸುಳ್ಳಾಗಿದೆ. ಇಂತಹ ಸಾಂಸ್ಕøತಿಕ ಕಲೆಗಳ ಪ್ರವಾಹವಾಗಿರುವ ದೇಶದಲ್ಲಿ ಲಕ್ಷಾಂತರ ಯುವ ಸಮುದಾಯ ಕಲೆಯಲ್ಲಿ ಅಪಾರ ಆಸಕ್ತಿಯನ್ನು ಹೊಂದಿದೆ. ಇದಕ್ಕೆ ಅಂತರ್ಜಾಲದಲ್ಲಿ ದೇಶದ ವಿವಿಧ ಸಂಸ್ಕøತಿಗಳ ಪರಿಚಯ ಹಾಗೂ ಮಾಹಿತಿ ಲಭ್ಯವಿರುವುದೇ ಸಾಕ್ಷಿಯಾಗಿದೆ. ಯುವಪೀಳಿಗೆಯ ಸಂಸ್ಕøತಿಯ ಅರಿವು ಮತ್ತು ಪಾಲ್ಗೊಳ್ಳುವಿಕೆ ಇದ್ದರೂ , ಸರಿಯಾದ ನಿರ್ದೇಶನದ ಅಗತ್ಯತೆ ಇದೆ. ಆರ್ಥಿಕ, ಸಂವಹನ ,ತರಬೇತಿ ವ್ಯವಸ್ಥೆಗಳ ಪೂರೈಕೆಯಿಂದ ಸಾಂಸ್ಕøತಿಕ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ಒದಗಿಸಬಹುದು. ಈ ನಿಟ್ಟಿನಲ್ಲಿ ವಿ.ವಿ.ಗಳ ನೀತಿಗಳಲ್ಲಿ ಬದಲಾವಣೆಗಳು ಆಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ದೇರಳಕಟ್ಟೆಯ ಯೇನೆಪೋಯ ವಿಶ್ವವಿದ್ಯಾಲಯದ ಕುಲಾಧಿಪತಿ ವೈ. ಅಬ್ದುಲ್ಲ ಕುಂಞÂ, ನವದೆಹಲಿಯ ಎಐಯುನ ಸಹ ಕಾರ್ಯದರ್ಶಿ ಡಾ. ಸ್ಯಾಮ್ಸನ್ ಡೇವಿಡ್, ಪ್ರ`ಭಾರ ಉಪ ಕುಲಪತಿ ಪ್ರೊ. ಪಕ್ಕಳ, ಮಂಗಳೂರು ವಿವಿ ಕುಲಸಚಿವ ಪ್ರೊ. ಟಿ.ಡಿ. ಕೆಂಪರಾಜು, ವೀಕ್ಷಕ ಅರುಣ್ ಪಾಟೀಲ್, ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ಡಾ. ಲೋಕೇಶ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ನಿದೇರಶನಾಲಯದ ನಿರ್ದೇಶಕ ಪ್ರ್ಪ್.ಪಿ.ಎಲ್. ಧರ್ಮ ಸ್ವಾಗತಿಸಿದರು.
ಭಾರತದಲ್ಲಿ ಸಿನಿಮಾಗಳಿಗೆ ಸಿಗುವಂತಹ ಗೌರವ ಪ್ರಚಾರ ನಮ್ಮ ಪಾರಂಪರಿಕ ಕಲೆಗಳಿಗೆ ಸಿಗುತ್ತಿಲ್ಲ. ಸಿನಿಮಾ ಮನರಂಜನೆಗಾಗಿ ಮಾತ್ರವಾಗಿದ್ದರೂ ಅದನ್ನು ಬೃಹತ್ ಆಗಿ ಸ್ವೀಕರಿಸಿದ ಕಾರಣದಿಂದ ನಮ್ಮ ದೇಶೀಯ ಹಲವು ಕಲೆಗಳು ಮೂಲೆಗುಂಪಾಗುತ್ತಿದೆ. ಸಿನಿಮಾ ಶ್ರೇಷ್ಠ ಕಲೆಯಾಗಿದ್ದರೂ ಭಾರತದಲ್ಲಿ ಅದೊಂದೇ ಕಲೆ ಇರುವುದಲ್ಲ. ಸಿನಿಮಾಗಳಿಗಿಂತ ನಮ್ಮ ದೇಶೀಯ ಕಲೆಗಳು ನಮ್ಮ ಸಂಸ್ಕ ೃತಿಯನ್ನು ಪಸರಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂಬುದೂ ಅಷ್ಟೇ ಮುಖ್ಯ. ಆ ನಿಟ್ಟಿನಲ್ಲಿ ಮೂಲೆಗುಂಪಾಗುತ್ತಿರುವ ನೂರಾರು ಕಲೆಗಳನ್ನು ರಕ್ಷಿಸಿ ಬೆಳೆಸಬೇಕಾದರೆ ವಿಶ್ವವಿದ್ಯಾಲಯಗಳು, ಸರಕಾರ ಹಾಗೂ ಯುವಜನತೆ ಕೊಡುಗೆ ನೀಡಬೇಕು .
ಆಕರ್ಷಕ ಮೆರವಣಿಗೆ
ಉದ್ಘಾಟನೆಗೆ ಪೂರ್ವಭಾವಿಯಾಗಿ ವಿಶೇಷ ಆಕರ್ಷಣೆಯಾಗಿ ವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳ ತಂಡದಿಂದ ವಿಶಿಷ್ಠವಾದ ಸಾಸ್ಕ ೃತಿಕ ಮೆರವಣಿಗೆ ವಿ.ಸಿ. ಬಂಗಲೆ ಬಳಿಯಿಂದ ಪ್ರೊ. ಬಿ. ಶೇಕ್ ಆಲಿ ಮಾರ್ಗದ ಮೂಲಕ ಸಾಗಿ ಮಂಗಳಾ ಆಡಿಟೋರಿಯಂ ತಲುಪಿತು. ದಕ್ಷಿಣ ವಲಯದ ಪಾಂಡಿಚೇರಿ ಹೊರತುಪಡಿಸಿ ಇತರ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯದ 26 ವಿಶ್ವವಿದ್ಯಾಲಯಗಳು ಪಾಲ್ಗೊಂಡಿದೆ. ಕರ್ನಾಟಕದ 14, ಕೇರಳದ 7, ತಮಿಳುನಾಡಿನ ಎರಡು, ಆಂಧ್ರದ ಎರಡು ಹಾಗೂ ತೆಲಂಗಾಣದ ಒಂದು ವಿವಿ ಪಾಲ್ಗೊಂಡಿದೆ. ಪುಜಾ ಕುಣಿತ, ಡೊಳ್ಳು ಕುಣಿತ, ಮೋಹಿನಿಯಟ್ಟಂ, ಸಿಂಹ ನೃತ್ಯ, ತಟ್ಟಿರಾಯ ಮೊದಲಾದ ನೃತ್ಯಗಳ ವೇಷವೈವಿಧ್ಯತೆ ಗಮನ ಸೆಳೆದವು. 26 ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಸುಮಾರು 2,500 ಸ್ಪರ್ಧಾಳುಗಳು ನಾಲ್ಕು ದಿನಗಳ ಕಾಲ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
**ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎರಡನೆಯ ಬಾರಿಗೆ ನಡೆಯುತ್ತಿರುವ ಯುವಜನೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
** ಉದ್ಘಾಟನಾ ಸಮಾರಂಭದಲ್ಲಿ ವಿವಿಧ ವಿವಿ ತಂಡಗಳ ಸಾಂಸ್ಕ ೃತಿಕ ಮೆರವಣಿಗೆ ಮೇಳೈಸಿತು.
**ದಕ್ಷಿಣ ವಲಯ ಅಂತರ್ ವಿವಿ ಯುವಜನೋತ್ಸವಕ್ಕೆ ಸುಸಜ್ಜಿತ ಸೌಲಭ್ಯಗಳಿದ್ದು ಐದು ವೇದಿಕೆಗಳಿವೆ.
** 2003ರಲ್ಲಿ ಮಂಗಳೂರು ವಿವಿಯಲ್ಲಿ ದಕ್ಷಿಣ ವಲಯ ಆಂತರ್ ವಿವಿ ಯುವಜನೋತ್ಸವ ನಡೆದಿತ್ತು. ಆ ಬಳಿಕ 13ವರ್ಷಗಳ ಬಳಿಕ ಈ ಅವಕಾಶ ಸಿಕ್ಕಿದೆ. 30ನೆಯ ದಕ್ಷಿಣ ವಲಯ ಯುವಜನೋತ್ಸವ ಆಯೋಜಿಸುವ ಅವಕಾಶವೂ ನಮ್ಮ ರಾಜ್ಯಕ್ಕೆ ದಕ್ಕಿತ್ತು. ತುಮಕೂರು ವಿವಿಯಲ್ಲಿ ನಡೆದ ಯುವಜನೋತ್ಸವದಲ್ಲಿ ಮಂಗಳೂರು ವಿವಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.