ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: 37ರ ಹರೆಯದ ವ್ಯಕ್ತಿಯೋರ್ವ ನಾಪತ್ತೆಯಾಗಿರುವ ಕುರಿತು ನಾಲ್ಕು ವರ್ಷಗಳ ಬಳಿಕ ಉಳ್ಳಾಲ ಠಾಣೆಯಲ್ಲಿ ಆತನ ಸಹೋದರ ನಾಪತ್ತೆ ದೂರು ದಾಖಲಿಸಿದ್ದಾರೆ.
ಹಿಂದೆಯೂ 2 ವರ್ಷ ನಾಪತ್ತೆಯಾಗಿದ್ದ: ಸಹೋದರ ನಾಸಿರ್ ಆಗಾಗ ಮನೆ ಬಿಟ್ಟು ಹೋಗುವ ಚಾಳಿಯವನಾಗಿದ್ದು, ಮನೆಯವರಲ್ಲಿ ಹೇಳದೆ ಹೊರಗಡೆ ಹೋಗಿ ಮನಸಾದಾಗ ವಾಪಾಸು ಬರುತ್ತಿದ್ದ. 2009ರ ಇಸವಿಯಲ್ಲಿ ಮನೆಬಿಟ್ಟು ಹೋದಾತ ಎರಡು ವರ್ಷ ಕಳೆದ ಬಳಿಕ 2011ರಲ್ಲಿ ವಾಪಸ್ಸಾಗಿದ್ದ. ಮತ್ತೆ ಅದೇ ಇಸವಿಯಲ್ಲಿ ಯಾರಲ್ಲೂ ಹೇಳದೇ ನಾಪತ್ತೆಯಾಗಿದ್ದು, ವಾಪಸ್ಸು ಬರುವನೆಂದು ಮನೆಮಂದಿ ಭರವಸೆಯಿಂದಿದ್ದರೂ ನಾಲ್ಕು ವರ್ಷಗಳಾದರೂ ಬಾರದೇ ಇದ್ದುದರಿಂದ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.