Site icon Ullalavani

ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಆರೋಗ್ಯ ತಪಾಸಣೆ ಶಿಬಿರಗಳಲ್ಲಿ ಭಾಗವಹಿಸಲು ಜನ ಹಿಂಜರಿಯುತ್ತಿದ್ದು, ಆತಂಕಗಳನ್ನು ದೂರವಿರಿಸಿ ತಪಾಸಣೆಗಳನ್ನು ನಡೆಸಿದಲ್ಲಿ ಉಲ್ಬಣಗೊಳ್ಳುವ ರೋಗಗಳನ್ನು ತಪ್ಪಿಸಬಹುದು ಎಂದು 317ಡಿ ಇಂಟರ್ ನ್ಯಾಶನಲ್ ಲಯನ್ಸ್ ಕ್ಲಬ್‍ನ ಜಿಲ್ಲಾ ಉಪ ಗವರ್ನರ್ ಲಯನ್ ಎಂ.ಅರುಣ್ ಶೆಟ್ಟಿ ಹೇಳಿದರು.

ಅಶೋಕನಗರದ ಲಯನ್ಸ್ ಕ್ಲಬ್, ಉಳ್ಳಾಲದ ಧರ್ಮರಕ್ಷಣ ಮೊಗವೀರ ವೇದಿಕೆ ಹಾಗೂ ಅತ್ತಾವರದ ಕೆ.ಎಂ.ಸಿ ಆಸ್ಪತ್ರೆ ಸಹಭಾಗಿತ್ವದಲ್ಲಿ ಉಳ್ಳಾಲದ ಮೊಗವೀರಪಟ್ಣ ಅನುದಾನಿತ ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಭಾನುವಾರ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಲಯನ್ಸ್ ಸಂಸ್ಥೆ ಜನುಪಯೋಗಿಯಾಗಿ ಆಸ್ಪತ್ರೆಗಳ ಹಾಗೂ ಸಂಘಸಂಸ್ಥೆಗಳ ಸಹಕಾರದೊಂದಿಗೆ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿದೆ. ಇದರ ಪ್ರಯೋಜನವನ್ನು ಜನ ಆತಂಕವಿಲ್ಲದೆ ಪಡೆದುಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಮಾಧವ್ ಉಳ್ಳಾಲ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ .66ರ 14 ಕಿ.ಮೀ ಉದ್ದದಲ್ಲಿ ಗಿಡ ನೆಡುವ ಯೋಜನೆಯನ್ನು ರೂಪಿಸಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮರಕ್ಷಣ ಮೊಗವೀರ ವೇದಿಕೆಯ ಗೌರವ ಸಲಹೆಗಾರ ಉಮೇಶ್.ಟಿ.ಕರ್ಕೇರ ಹೊಸಬೆಟ್ಟು ವಹಿಸಿದ್ದರು. ಲಯನ್ಸ್ ಕ್ಲಬ್‍ನ ಜಿಲ್ಲಾ ಗವರ್ನರ್ ಲಯನ್ ಕವಿತಾ.ಎಸ್.ಶಾಸ್ತ್ರಿ, ಅಶೋಕನಗರ ಲಯನ್ಸ್ ಕ್ಲಬ್ ನ ಅಧ್ಯಕ್ಷ ಲೋಕೇಶ್ ಉಳ್ಳಾಲ, ಲಯನೆಸ್ ಕ್ಲಬ್ ಅಶೋಕನಗರದ ಅಧ್ಯಕ್ಷೆ ಬಬಿತಾ ಲೋಕೇಶ್, ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಉದ್ಯಮಿ ಮೋಹನ್ ಪುತ್ರನ್ ಬೆಂಗ್ರೆ, ಉಡುಪಿ ಮೊಗವೀರ ಯುವ ಸಂಘಟನೆ ಮಾಜಿ ಅಧ್ಯಕ್ಷ ಜಯ. ಸಿ.ಕೋಟ್ಯಾನ್, ಉಪ್ಪಳ ಮೊಗವೀರ ಸಭಾದ ಅಧ್ಯಕ್ಷ ಶಿವರಾಮ ಬಂಗೇರ, ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ಹರ್ಬರ್ಟ್ ಮರಿಯೊ ಪಿರೇರಾ, ಉಳ್ಳಾಲ ನಗರಸಭೆ ಸದಸ್ಯೆ ಮೀನಾಕ್ಷಿ ದಾಮೋದರ್ ಉಳ್ಳಾಲ, ಧರ್ಮರಕ್ಷಣಾ ಮೊಗವೀರ ವೇದಿಕೆ ಗೌರವಾಧ್ಯಕ್ಷ ಜಗದೀಶ್.ಆರ್.ಬಂಗೇರ, ಅಧ್ಯಕ್ಷ ಮನೋಜ್ ಸಾಲ್ಯಾನ್, ಪ್ರಧಾನ ಸಂಚಾಲಕ ಮಾಧವ ಉಳ್ಳಾಲ್, ಸಂಘಟನಾ ಕಾರ್ಯದರ್ಶಿ ದಯಾನಂದ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

ಬಬಿತಾ ಲೋಕೇಶ್ ಸ್ವಾಗತಿಸಿದರು. ವಾಸುದೇವ ಕಾರ್ಯಕ್ರಮ ನಿರೂಪಿಸಿದರು. ವೀಣಾ.ಪಿ.ಉಳ್ಳಾಲ್ ವಂದಿಸಿದರು.

Exit mobile version