ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮಂಗಳೂರು: ಕೇಂದ್ರ ಕಾರಾಗೃಹಕ್ಕೆ ಡಿಸಿಪಿ ನೇತೃತ್ವದಲ್ಲಿ ನೂತನ ಕಮೀಷನರ್ ಚಂದ್ರಶೇಖರ್ ಹಾಗೂ ಪೊಲೀಸರು ದಾಳಿ ನಡೆಸಿದ್ದು, ದಾಳಿಯಲ್ಲಿ 12 ಮೊಬೈಲ್ ಹಾಗೂ ಚಾರ್ಜರ್, 3 ಸಿಮ್ ಕಾರ್ಡ್‍ಗಳು ಮತ್ತು 5 ಗಾಂಜಾ ಪ್ಯಾಕೆಟ್ ಮತ್ತು ಚಾರ್ಜರ್ ಪತ್ತೆಯಾಗಿದೆ.
ಫೈಲ್ ಫೋಟೋ
ಜೈಲಿನಲ್ಲಿ ಡಬಲ್ ಮರ್ಡರ್ ನಡೆದ ನಂತರ ಭದ್ರತೆ ಹೆಚ್ಚಿಸಲಾಗಿತ್ತು. ಭದ್ರತೆ ಹೆಚ್ಚಿಸಿದ್ದರೂ ಜೈಲಿನೊಳಗೆ ಮಾದಕ ವಸ್ತುಗಳು ಮತ್ತು ಮಾರಕಾಯುಧಗಳ ಪೂರೈಕೆ ನಿಂತಿರಲಿಲ್ಲ. ಈ ಹಿನ್ನಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಅಪರಾಧ ವಿಭಾಗದ ಡಿಸಿಪಿ ಸಂಜೀವ ಪಟೇಲ್ ನೇತೃತ್ವದಲ್ಲಿ ನಡೆದ ದಾಳಿ ನಡೆಸಿದ್ದಾರೆ.
ಇಂದು ನಡೆದ ದಾಳಿಯಲ್ಲಿ ಬರ್ಕೆ ಠಾಣೆ ಸಿಸಿಬಿ, ಮತ್ತು ಡಿಸಿಪಿ ತಂಡದ ಪೊಲೀಸರು ಭಾಗಿಯಾಗಿದ್ದಾರೆ.