ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ದಂತ ಚಿಕಿತ್ಸೆಯ ಬಗ್ಗೆ ಸಂಶೋಧನೆಗಳು ನಿರಂತರ ಆಗಬೇಕಿದ್ದು, ಈ ನಿಟ್ಟಿನಲ್ಲಿ ಸಂಶೋಧನೆಗಳ ಕುರಿತು ಜ್ಞಾನ ವೃದ್ಧಿಸುವ ಸಲುವಾಗಿ ಇಂತಹ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮಗಳು ಪೂರಕ ಎಂದು ಅಂತಾರಾಷ್ಟ್ರೀಯ ದಂತ ಕಾಲೇಜುಗಳ ಅಧ್ಯಕ್ಷ ಪ್ರೊ.ಎಸ್.ಎಂ.ಬಾಲಾಜಿ ಅಭಿಪ್ರಾಯಪಟ್ಟರು.
ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದ ಎ.ಬಿ ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆ, ಎ.ಬಿ.ಶೆಟ್ಟಿ ಇಂಟರ್ನಿಗಳ ಅಕಾಡೆಮಿಕ್ ಕ್ಲಬ್ ಹಾಗೂ ಅಂತಾರಾಷ್ಟ್ರೀಯ ದಂತ ಕಾಲೇಜಿನ ಆಶ್ರಯದಲಿಗುರುವಾರ ಎ.ಬಿ.ಶೆಟ್ಟಿ ಕಾಲೇಜಿನ ವಿಂಶತಿ ಭವನದಲ್ಲಿ ಗುರುವಾರ ನಡೆದ `ಯುವಜನಾಂಗಕ್ಕೆ ದಂತವಿಜ್ಞಾನ ಭವಿಷ್ಯದ ಮಾರ್ಗಸೂಚಿ’ ಕುರಿತ ನಿರಂತರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎ.ಬಿ.ಶೆಟ್ಟಿ ದಂತ ಕಾಲೇಜಿನ ಸ್ಥಾಪಕ ಡೀನ್ ಡಾ.ಯನ್.ಶ್ರೀಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ದಂತ ಕಾಲೇಜಿನ ಮಾಜಿ ಅಧ್ಯಕ್ಷ ಡಾ.ಎ.ಕುಮಾರಸ್ವಾಮಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.ಎ.ಬಿ.ಶೆಟ್ಟಿ ಸ್ನಾತಕೋತ್ತರ ವಿಭಾಗ ಅಧ್ಯಯನದ ನಿರ್ದೇಶಕ ಡಾ.ಬಿ.ರಾಜೇಂದ್ರ ಪ್ರಸಾದ್, ಉಪಪ್ರಾಂಶುಪಾಲೆ ಪ್ರೊ. ಮಿತ್ರಾ.ಯನ್.ಹೆಗ್ಡೆ, ಡಾ.ಬಿ.ಸುರೇಶ್ ಬಾಬು, ಡಾ.ರಾಜೀವ್ ಕೆ.ಜುಗ್ ಉಪಸ್ಥಿತರಿದ್ದರು.
ಕಾಲೇಜಿನ ಡೀನ್ ಡಾ.ಯು.ಯಸ್.ಕೃಷ್ಣ ನಾಯಕ್ ಸ್ವಾಗತಿಸಿದರು.