Site icon Ullalavani

ಉಳ್ಳಾಲ:ಅಬ್ಬಕ್ಕ ಪ್ರತಿಮೆಗಿಲ್ಲ ಸ್ವಚ್ಛತೆ ಭಾಗ್ಯ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ವೀರರಾಣಿ ಅಬ್ಬಕ್ಕಳ ಪ್ರತಿಮೆ ಒಂದೆಡೆ ಧೂಳಿನಿಂದ ಮುಳುಗಿದ್ದರೆ, ಇನ್ನೊಂದೆಡೆ ಕಾಗೆ ಮಾಡಿದ ಗಲೀಜಿನಿಂದ ನೋಡಲಾಗದ ಸ್ಥಿತಿಯಲ್ಲಿದ್ದು, ಕೇವಲ ಅಬ್ಬಕ್ಕ ಉತ್ಸವ ಮತ್ತು ರಾಷ್ಟ್ರೀಯ ಹಬ್ಬಗಳಿಗೆ ಮಾತ್ರ ರಾಣಿ ಅಬ್ಬಕ್ಕಳ ಪ್ರತಿಮೆಗೆ ಗೌರವ ಸೀಮಿತವಾಗಿದೆ.

ಉಳ್ಳಾಲ ಜಂಕ್ಷನ್ನಿಗೆ ಪ್ರಯಾಣಿಸುವಾಗ ಮೊದಲಿಗೆ ಸಿಗುವುದೇ ಅಬ್ಬಕ್ಕರಾಣಿ ವೃತ್ತ. ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರ ವನಿತೆಯ ಪ್ರತಿಮೆ ಧೂಳು ಹಿಡಿದರೂ ಜನಪ್ರತಿನಿಧಿಗಳಾಗಲಿ, ಅಬ್ಬಕ್ಕ ಉತ್ಸವ ಸಮಿತಿಯಾಗಲಿ ಕೇವಲ ಉತ್ಸವಗಳ ಸಂದರ್ಭ ಹಾರ ಹಾಕಿ, ಗುಣಗಾನ ಮಾಡುತ್ತಿದ್ದಾರೆಯೇ ಹೊರತು, ದಿನದಲ್ಲಿ ಲಕ್ಷಾಂತರ ಮಂದಿ ನೋಡುವಂತಹ ಪ್ರತಿಮೆಯ ಕನಿಷ್ಟ ಶುಚಿಗೊಳಿಸುವ ಪ್ರಜ್ಞೆಗೆ ಮುಂದಾಗಿಲ್ಲ.

ತೊಕ್ಕೊಟ್ಟು-ಉಳ್ಳಾಲ ಕಾಂಕ್ರೀಟಿಕರಣ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ತೊಕ್ಕೊಟ್ಟುವಿನಲ್ಲಿ ಅಬ್ಬಕ್ಕ ಭವನ ಶೀಘ್ರದಲ್ಲೇ ನಡೆಯಲಿದೆ. ಆದರೆ ಅಪ್ರತಿಮ ವೀರರಿಗೆ ಗೌರವ ಸೂಚಿಸುವ ಸಲುವಾಗಿ ಸ್ಥಾಪಿಸಿರುವ ಪ್ರತಿಮೆಗಳಿಗೆ ಕನಿಷ್ಟ ಪಕ್ಷ ಶುಚಿಗೊಳಿಸುವ ಕಾರ್ಯಕ್ಕೆ ಸಂಬಂಧಪಟ್ಟವರು ಮುಂದಾಗುವ ಮೂಲಕ ನೈಜ ಗೌರವವನ್ನು ವ್ಯಕ್ತಪಡಿಸಬೇಕಿದೆ.

Exit mobile version