ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು : ಎಟ್ಟಿಕ್ಕುಳಂನಲ್ಲಿ ನಡೆಯುವ ತಾಜುಲ್ ಉಲಮಾ (ಖ.ಸಿ.) ಉರೂಸ್ ಪ್ರಚಾರಾರ್ಥ ಅಂಗವಾಗಿ ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ 60 ಫಲಾನುಭವಿಗರಿಗೆ ಅಕ್ಕಿ ವಿತರಣಾ ಕಾರ್ಯಕ್ರಮವು ಸೇವಂತಿಗುಡ್ಡೆಯ ವಿಕಾಯತುಲ್ ಇಸ್ಲಾಂ ಮದ್ರಸಾ ಹಾಲ್‍ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಅಲ್ತಾಫ್ ಕುಂಪಲ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಕೋಶಾಧಿಕಾರಿ ಫಾರೂಕ್ ಸೇವಂತಿಗುಡ್ಡೆ, ಆಶ್ರಫ್ ಸೇವಂತಿಗುಡ್ಡೆ, ಇಸ್ಮಾಯಿಲ್ ಸೇವಂತಿಗುಡ್ಡೆ, ಬದ್ರುದ್ದೀನ್ ಸೇವಂತಿಗುಡ್ಡೆ, ಶಮೀರ್ ಸೇವಂತಿಗುಡ್ಡೆ, ವಿಕಾಯತುಲ್ ಇಸ್ಲಾಂ ಮದ್ರಸದ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಉಪಸ್ಥಿತರಿದ್ದರು. ಅನ್ಸಾರ್ ಅಳೇಕಲ ಸ್ವಾಗತಿಸಿದರು ಜಾಫರ್ ಯು.ಎಸ್. ವಂದಿಸಿದರು.