ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಉಳ್ಳಾಲ ಖಾಝಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿ ಉಳ್ಳಾಲ ಕ್ಷೇತ್ರದಲ್ಲಿ ಅರೆಬಿಕ್ ಕಾಲೇಜು ಸ್ಥಾಪನೆಗೆ ಮೂಲ ಕಾರಣಕರ್ತರಾರ ತಾಜುಲ್ ಉಲಮಾ ದರ್ಗಾ ಉರೂಸ್ ಸಂದಲ್ ಮೆರವಣಿಗೆ ಕಾರ್ಯಕ್ರಮ ಆರಂಭಿಸುವ ಮೂಲಕ ಉಳ್ಳಾಲದಲ್ಲಿ ಚಾಲನೆ ನೀಡಲಾಯಿತು.
ಅಲ್ ಮದೀನ ಅಧ್ಯಕ್ಷ ಪಿಎಂ ಅಬ್ಬಾಸ್ ಮುಸ್ಲಿಯಾರ್ ತಾಜುಲ್ ಉಲಮಾ ಅವರ ಸಾಧನೆಗಳ ಬಗ್ಗೆ ವಿವರಿಸಿದರು. ದರ್ಗಾ ಅಧ್ಯಕ್ಷ ಯು.ಎಸ್. ಹಂಝ ಅತಿಥಿಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಶೀದ್ , ಮಾಣಿ ಉಸ್ತಾದ್, ಏಷ್ಯನ್ ಬಾವಾ, ಉಂಞÂ , ಹೈದರ್ ಪರ್ತಿಪ್ಪಾಡಿ, ಉಳ್ಳಾಲ ದರ್ಗಾ ಕಾರ್ಯದರ್ಶಿ ಯಿ.ಟಿ. ಇಲ್ಯಾಸ್, ಉಳ್ಳಾಲ ದರ್ಗಾ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹನೀಫ್ ಹಾಜಿ, ದರ್ಗಾ ಕಾರ್ಯದರ್ಶಿ ಅಶ್ರಫ್ ರೈಟ್‍ವೇ, ಫಾರೂಕ್ ಮಾರ್ಗತಲೆ, ಹಮೀದ್ ಕಲ್ಲಾಪು, ಕೆ.ಇ. ಸಾಲೆತ್ತೂರು,ಅಬ್ದುಲ್ ರಶೀದ್ ಝೈನಿ, ಸಾಮಣಿಗೆ ಮದನಿ, ಮಹಮ್ಮದ್ ಹಾಜಿ ಸ್ವಾಮಿಲ್ ಮೊದಲಾದವರು ಉಪಸ್ಥಿತರಿದ್ದರು.