Site icon Ullalavani

ಗೃಹವೈದ್ಯರ ಮಾಹಿತಿ ಕಾರ್ಯಗಾರ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಗೃಹವೈದ್ಯರ ಮಾಹಿತಿ ಕಾರ್ಯಗಾರ ಇತ್ತೀಚೆಗೆ ಜರುಗಿತು.

ಕ್ಷೇಮ ವೈದ್ಯಕೀಯ ಕಾಲೇಜಿನ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ಕಾರ್ಯಗಾರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಪರಿಪೂರ್ಣ ವೈದ್ಯರಾಗಲು ಗೃಹವೈದ್ಯಕೀಯ ಅವಧಿಯು ಪೂರಕವಾಗಿರುತ್ತದೆ. ಇದರ ಸಮರ್ಪಕ ಪ್ರಯೋಜನ ಪಡೆದು, ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಎಂದರು.

ಕಾಲೇಜಿನ ವೈದ್ಯಕೀಯ ಶಿಕ್ಷಣ ವಿಭಾಗದ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ| ಕರುಣಾ ರಮೇಶ್, ಕುಲಸಚಿವೆ ಡಾ| ಜಯಪ್ರಕಾಶ್ ಶೆಟ್ಟಿ ಕೆ. , ಸಹ ಪ್ರಾಚಾರ್ಯರಾದ ಡಾ| ಪಿ.ಎಸ್. ಪ್ರಕಾಶ್ ಹಾಗೂ ಡಾ| ಅಮೃತ್ ಮೀರಜ್‍ಕರ್ ಉಪಸ್ಥಿತರಿದ್ದರು.

Exit mobile version