Site icon Ullalavani

ತಿಬ್ಲಪದವು:ಫರ್ನಿಚರ್ ಅಂಗಡಿಯಲ್ಲಿ ಬೆಂಕಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ: ಫರ್ನಿಚರ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಸಾವಿರಾರು ರೂ. ಬೆಲೆಬಾಳುವ ಸೊತ್ತುಗಳು ಭಸ್ಮವಾಗಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ತಿಬ್ಲಪದವು ಎಂಬಲ್ಲಿ ಸೋಮವಾರ ನಸುಕಿನ ಜಾವ ಬೆಳಕಿಗೆ ಬಂದಿದೆ.

 

Jpeg

ಹಮೀದ್ ಎಂಬವರಿಗೆ ಸೇರಿದ ಫರ್ನಿಚರ್ ಅಂಗಡಿಯಲ್ಲಿ ಘಟನೆ ಸಂಭವಿಸಿದೆ. ಅಂಗಡಿಯಲ್ಲಿ ಮಾರಾಟಕ್ಕೆ ಇಡಲಾಗಿದ್ದ ಹಳೇ ಮನೆ ಸಾಮಗ್ರಿಗಳು ಬೆಂಕಿಗೆ ಉರಿದು ರೂ.50,000 ನಷ್ಟ ಸಂಭವಿಸಿದೆ.

ಘಟನೆಗೆ ಶಾರ್ಟ್ ಸಕ್ರ್ಯೂಟ್ ಕಾರಣವಾಗಿರಬಹುದೆಂಬ ಹೇಳಲಾಗುತ್ತಿದ್ದರೂ, ಕಿಡಿಗೇಡಿಗಳು ಕೃತ್ಯ ಎಸಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ನಸುಕಿನ ಜಾವ ಸ್ಥಳೀಯರೋರ್ವರು ಮಸೀದಿಗೆ ನಮಾಜಿಗೆ ತೆರಳುವ ಸಂದರ್ಭ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದರು. ಬಳಿಕ ಅಂಗಡಿ ಮಾಲೀಕ ಹಮೀದ್ ಅವರಿಗೂ ಮಾಹಿತಿ ನೀಡಿದ್ದಾರೆ.

Exit mobile version