Site icon Ullalavani

ಜೈವಿಕ ಸಂಪತ್ತನ್ನು ರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ಪ್ರತಿಯೊಂದು ಜೈವಿಕ ಸಂಪತ್ತಿನಲ್ಲೂ ಅದರದೇ ಆದ ವೈಶಿಷ್ಟ್ಯತೆ ಇದ್ದು ,ಒಂದನ್ನೊಂದು ಪ್ರಾಕೃತಿಕವಾಗಿ ಅವಲಂಬಿಸಿದ್ದು ಅದರ ಬಗೆಗೆ ವಿದ್ಯಾರ್ಥಿಗಳು ಗ್ರಹಿಕೆ ಮತ್ತು ಸಂಶೋಧನೆಯಲ್ಲಿ ತೊಡಗಿಸುವಂತೆ ದೇರಳಕಟ್ಟೆ ಕಣಚೂರು ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಅನಾಟಮಿ ವಿಭಾಗದ ಮುಖ್ಯಸ್ಥ ಡಾ.ಅರುಣಾಚಲಂ ಕುಮಾರ್ ಕರೆ ನೀಡಿದರು .

ಅವರು ಉಳ್ಳಾಲ ಸುಭಾಸ್‍ನಗರದ ಕೆ.ಪಾಂಡ್ಯರಾಜ್ ಬಲ್ಲಾಳ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ನಡೆದ “ಜೈವಿಕ ವೈವಿಧ್ಯ ಮತ್ತು ಅದರ ಸಂರಕ್ಷಣೆ ” ಕುರಿತಾದ ಪ್ರಾದೇಶಿಕ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು .

ಜೈವಿಕ ಸಂಪತ್ತನ್ನು ರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ .ಪ್ರತಿ ಜೀವ ರಾಶಿಯಲ್ಲೂ ಅದರದೇ ಆದ ವೈಶಿಷ್ಟ್ಯವಿದ್ದು ಅದರ ಬಗ್ಗೆ ವಿದ್ಯಾರ್ಥಿಗಳು ಆಳವಾಗಿ ಗ್ರಹಿಸಿ ,ಸಂಶೋಧನೆಗಳನ್ನು ನಡೆಸಬೇಕು. ಹಕ್ಕಿಯು ತನ್ನ ಕತ್ತನ್ನು ಹಿಂತಿರುಗಿಸಿ ನೋಡದಿದ್ದರೂ ,ಮುಂಬರುವ ಆಪತ್ತನ್ನು ಜಗತ್ತಿಗೆ ತಿಳಿಸುವ ವಿಶೇಷ ಗ್ರಹಣ ಶಕ್ತಿಯನ್ನು ಹೊಂದಿದೆ .ಅದು ತನ್ನ ಕೈ ,ಕಾಲುಗಳಿಂದ ಏನನ್ನೂ ಮಾಡದಿದ್ದರೂ ಆ ಹಕ್ಕಿಯ ಬಗ್ಗೆ ಅನೇಕ ವಿಶ್ವವಿದ್ಯಾನಿಲಯಗಳು ಸಂಶೋಧನೆಯಲ್ಲಿ ತೊಡಗಿರುವುದೇ ಅದರ ವೈವಿಧ್ಯತೆಗೆ ಸಾಕ್ಷಿ .ಹಳ್ಳಿಯ ಕೂಲಿ ಕಾರ್ಮಿಕನೊಬ್ಬ ಗದ್ದೆಯಲ್ಲಿ ಕೆಲಸ ಮಾಡುವಾಗ ಸೊಳ್ಳೆಗಳು ಕಡಿದು ,ಕಡಿತ ಜಾಗದಲ್ಲಿ ಜೋರಾಗಿ ಉಜ್ಜಿದರೆ ಯಾವುದೇ ಸಾಂಕ್ರಾಮಿಕ ರೋಗ ಬರುವುದಿಲ್ಲ ಎಂಬ ಹೇಳಿಕೆಯ ಆಧಾರದಲ್ಲೂ ಅನೇಕ ಸಂಶೋಧನೆಗಳು ನಡೆಯುತ್ತಿರುವುದು ಸೃಷ್ಟಿಯ ವೈವಿಧ್ಯತೆಗೆ ಸಾಕ್ಷಿ ಎಂದು ನುಡಿದರು .

ಪಾಂಡ್ಯರಾಜ್ ಬಲ್ಲಾಳ್ ಕಾಲೇಜಿನ ಆಡಳಿತ ನಿರ್ದೇಶಕಿ ಡಾ.ಪ್ರಿಯಾ ಬಲ್ಲಾಳ್ ಮಾತನಾಡಿ ಪ್ರತ ವಿದ್ಯಾರ್ಥಿಗಳಲ್ಲೂ ಗ್ರಹಣ ಶೀಲ ಗುಣಗಳಿದ್ದು ಅದನ್ನು ಸಮರ್ಪಕವಾಗಿ ಬಳಸಿ ಮುಖ್ಯವಾಗಿ ನರ್ಸಿಂಗ್ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆಯುವಂತೆ ಹೇಳಿದರು .
ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಕೈನಿ ಸಿಸಿಲಿಯಾ , ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶರ್ಮಿಳಾ ಮುಖೇಶ್ ರಾವ್ , ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಜಿಸ್ಸಾ ಜೋಸ್ , ಉಪಸ್ಥಿತರಿದ್ದರು .

ಲಯ ಕೆ.ವಿ ಸ್ವಾಗತಿಸಿ ,ಅಲೀನ ಸಿಬಿ ವಂದಿಸಿದರು .ಆನ್ ಎಲಿಝಬೆತ್ ನಿರೂಪಿಸಿದರು .

Exit mobile version