Site icon Ullalavani

ಶಾಲಾ ಶಿಕ್ಷಕಕರಿಗೆ ಚಾಕ್ ಒದಗಿಸಲು ಅಶಕ್ತವಾದ ರಾಜ್ಯ ಸರಕಾರ: ಮೋನಪ್ಪ ಭಂಡಾರಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು:ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವು ಅಧಿಕಾರಕ್ಕೆ ಬಂದಂದಿನಿಂದ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ,ಅಕಸ್ಮಾತ್ ಮಾಡಿದ್ದರೂ ಅದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವಿದ್ದಾಗ ಮಂಜೂರಾದ ಯೋಜನೆಯಾಗಿದ್ದು ಪ್ರಸಕ್ತ ರಾಜ್ಯ ಕಾಂಗ್ರೆಸ್ ನೇತೃತ್ವದ ಸರಕಾರದ ಖಜಾನೆ ಖಾಲಿಯಾಗಿರುವುದಕ್ಕೆ ಶಾಲಾ ಶಿಕ್ಷಕರಿಗೆ ಚಾಕ್‍ಗಳನ್ನು ಒದಗಿಸಲು ಹೆಣಗಾಡುತ್ತಿರವುದೇ ಸ್ಪಷ್ಟ ಉದಾಹರಣೆ ಎಂದು ವಿದಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಅವರು ಲೇವಡಿ ಮಾಡಿದರು .

ಅವರು ತೊಕ್ಕೊಟ್ಟು ಕೊಲ್ಯದ ನಾರಾಯಣ ಗುರು ಸಭಾಭವನದಲ್ಲಿ ಮಂಗಳೂರು ವಿದಾನಸಭಾ ಕ್ಷೇತ್ರ ಬಿಜೆಪಿ ಯುವಮೋರ್ಚಾವತಿಯಿಂದ ನಡೆದ ಬೈಕ್ ರ್ಯಾಲಿ ಮತ್ತು “ಯುವ ಸಮವೇಶ”ವನ್ನು ಉದ್ಘಾಟಿಸಿ ಮಾತನಾಡಿದರು .ಜಗತ್ತಿನಲ್ಲೇ ಅರವತ್ತು ಶೇಕಡ ಯುವ ಶಕ್ತಿಯನ್ನು ಹೊಂದಿರುವ ರಾಷ್ಟ್ರ ನಮ್ಮದು ,ಒಳ್ಳೆಯ ಕೆಲಸಗಳನ್ನು ಹೊಗಳುವ ಸಂಸ್ಷøತಿ ನಮ್ಮದು ಎಂಬುದನ್ನು ಮಾಜಿ ಪ್ರದಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಾನು ಬಿಜೆಪಿ ಪಕ್ಷದವರಾದರೂ ಕಾಂಗ್ರೆಸಿನ ಮಾಜಿ ಪ್ರದಾನಿ ಇಂದಿರಾ ಗಾಂಧಿ ಅವರನ್ನು ದುರ್ಗೆ ಎಂದು ಬಣ್ಣಿಸುವ ಮುಖಾಂತರ ತೋರಿಸಿಕೊಟ್ಟಿದ್ದಾರೆ .ಆದರೆ ನಮ್ಮ ದೇಶದ ವಿರೋಧ ಪಕ್ಷದವರ ಬಾಯಲ್ಲಿ ಮಾತ್ರ ಪ್ರದಾನಿ ನರೇಂದ್ರ ಮೋದಿಯವರು ವಿಶ್ವವನ್ನೇ ಬೆರಗು ಮಾಡುತ್ತಿರುವ ಕೆಲಸಗಳ ಬಗ್ಗೆ ಉತ್ತಮ ಮಾತುಗಳು ಬಾರದಿರುವುದು ದುರದೃಷ್ಟ ಎಂದು ಹೇಳಿದರು .

ಮಾಜಿ ಪ್ರದಾನಿ ನೆಹರೂ ಅವರ ಕಾಲದಲ್ಲಿ ಅಮೇರಿಕನ್ನರಲ್ಲಿ ಭಾರತೀಯರು ಭಿಕ್ಷುಕರೆಂಬ ಭಾವನೆ ತಳೆದಿತ್ತು ,ಆದರೆ ಯಾವಾಗ ನರೇಂದ್ರ ಮೋದಿ ದೇಶದ ಪ್ರದಾನಿಯಾದರೋ ಅಂದಿನಿಂದಲೇ ಅಮೇರಿಕದ ದೊಡ್ಡಣ್ಣ ನಮ್ಮ ದೇಶದ ಪ್ರದಾನಿಗೆ ಕೆಂಪು ಹಾಸು ಹಾಕಿ ಅಮೇರಿಕಕ್ಕೆ ಗೌರವದಿಂದ ಬರಮಾಡಿದ್ದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಹೇಳಿದರು .ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವಿದ್ದಾಗ ಮಂಜೂರಾದ ಯೋಜನೆಗಳನ್ನೇ ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅನುಷ್ಠಾನಗೊಳಿಸುತ್ತಿದ್ದು ,ಕಾಂಗ್ರೆಸ್ ನೇತೃತ್ವದ ಸರಕಾರಕ್ಕೆ ಮಕ್ಕಳಿಗೆ ಶಿಕ್ಷಿಸುವ ಶಾಲಾ ಶಿಕ್ಷಕರಿಗೆ ಒಂದು ರೂಪಾಯಿ ಚಾಕನ್ನು ಒದಗಿಸುವ ಯೋಗ್ಯತೆ ಇಲ್ಲವೆಂದು ಲೇವಡಿ ಮಾಡಿದರು .

ಕುರ್ನಾಡು ಕ್ಷೇತ್ರ ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ ಭಾರತ ದೇಶವು ಯುವ ಶಕ್ತಿ ಆಧಾರದಲ್ಲಿ ಮುನ್ನಡೆಯುತ್ತಿದ್ದು ,ಯವಕರೆಲ್ಲರೂ ಸೇರಿ ಪ್ರದಾನಿ ನರೇಂದ್ರ ಮೋದಿಯವರ ಕನಸಿನ ಭಾರತ ಕಟ್ಟಲು ಕರೆ ನೀಡಿದರು .

ಈ ವೇಳೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ , ಸದಸ್ಯರಾದ ಜಯಶ್ರೀ ಪುದು , ಸಂತೋಷ್ ಬೋಳಿಯಾರ್ ಅವರನ್ನು ಸನ್ಮಾನಿಸಲಾಯಿತು .

ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ ಸಭಾಧ್ಯಕ್ಷತೆ ವಹಿಸಿದ್ದರು .ಮಾಜಿ ಶಾಸಕ ಜಿಲ್ಲಾ ವಕ್ತಾರ ಜಯರಾಮ ಶೆಟ್ಟಿ ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್ , ರಾಜ್ಯ ಪರಿಷತ್ ಸದಸ್ಯ ಸೀತಾರಾಮ ಬಂಗೇರ , ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಮೋಹನ್ ರಾಜ್ ಕೆ , ಯುವ ಮೋರ್ಚಾ ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ ಬ್ರಿಜೇಶ್ ಚೌಟ , ವಸಂತ್ ಹೊಸಬೆಟ್ಟು , ಬಿಜೆಪಿ ಕ್ಷೇತ್ರ ಪ್ರ.ಕಾರ್ಯದರ್ಶಿಗಳಾದ ಯಶವಂತ್ ಅಮೀನ್ , ಸಂಜೀವ ಶೆಟ್ಟಿ ಅಂಬ್ಲಮೊಗರು , ಯುವ ಮೋರ್ಚಾ ಕ್ಷೇತ್ರಾಧ್ಯಕ್ಷ ಜೀವನ್ ಕುಮಾರ್ ತೊಕ್ಕೋಟು ಪ್ರಸ್ತಾವಣೆಗೈದರು .ಗೋಪಿನಾಥ್ ಬಗಂಬಿಲ ಸ್ವಾಗತಿಸಿ , ಮನೋಜ್ ಆಚಾರ್ಯ ಪುದು ವಂದಿಸಿ,ಗಣೇಶ್ ಕಾಪಿಕಾಡ್ ನಿರೂಪಿಸಿದರು .

Exit mobile version