Site icon Ullalavani

ರಾಜ್ಯದ ಉದ್ದಗಲಕ್ಕೂ ಮಾದರಿ ಆಸ್ಪತ್ರೆಗಳ ನಿರ್ಮಾಣ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಕ್ಷಕಿರಣ, ಹೊರರೋಗಿಗಳ ವಿಭಾಗ, ಡಯಾಲಿಸಿಸ್, ಸ್ಪೀಚ್ ಥೆರಪಿ ಮೊದಲಾದ ವ್ಯವಸ್ಥೆಗಳುಳ್ಳ ಆಸ್ಪತ್ರೆಯನ್ನು ಮಾದರಿಯಾಗಿಟ್ಟುಕೊಂಡು ಖಅಸಗಿ ಆಸ್ಪತ್ರೆಗೆ ಮಿಗಿಲಾಗಿ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರವನ್ನು ನಿರ್ಮಿಸಲಾಗುವುದು. ಹಾಗೆಯೇ ರಾಜ್ಯದ ಉದ್ದಗಲಕ್ಕೂ ಮಾದರಿ ಆಸ್ಪತ್ರೆಗಳ ನಿರ್ಮಾಣ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ಉಳ್ಳಾಲದಲ್ಲಿ ನೂತನ ಸಮುದಾಯ ಆರೋಗ್ಯ ಕೇಂದ್ರದ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿ ಆಸ್ಪತ್ರೆ ನಿರ್ಮಾಣಕ್ಕಿಂತ ನಿರ್ವಹಣೆ ಕಷ್ಟ. ಹಾಗಾಗಿ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೊದಲ ಹಂತದಲ್ಲಿ 30ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ವಿಸ್ತರಿಸಲಾಗುವುದು ಎಂದರು.

ಉಳ್ಳಾಲ ನಗರಸಭೆಯ ಉಪಾಧ್ಯಕ್ಷೆ ರಝಿಯಾ ಇಬ್ರಾಹಿಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಗಳ್ ಕೂರತ್ ಶಿಲಾನ್ಯಾಸಗೈದು ದುಆ ನೆರವೇರಿಸಿದರು.

ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್. ಹಂಝ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್, ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬೆಸ್ಟಿಯನ್ ಚರ್ಚ್‍ನ ಧರ್ಮಗುರು ಫಾ. ,ಜೆ.ಬಿ.ಸಲ್ದಾನಾ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಉಪಾಧ್ಯಕ್ಷ ಸುರೇಶ್ ಭಟ್ನಗರ, ಉಳ್ಳಾಲ ಶ್ರೀ ಲಕ್ಷಿ ್ಮೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕರ ಕಿಣಿ, ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತ ಧರ್ಮ ಅರಸರ ಕ್ಷೇತ್ರದ ಲಕ್ಷ್ಮಣ ಉಳ್ಳಾಲ ಹೊೈಗೆ, ಉಳ್ಳಾಲ ಮಂಡಲ ಪಂಚಾಯಿತಿ ಮಾಜಿ ರವೀಂದ್ರರಾಜ್, ಉಳ್ಳಾಲ ಶ್ರೀ ವೀರಭದ್ರ ಕ್ಷೇತ್ರದ ಅಧ್ಯಕ್ಷ ಐತಪ್ಪ ಶೆಟ್ಟಿಗಾರ್, ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಕೋಟೆಪುರ ಜುಮಾ ಮಸೀದಿಯ ಅಧ್ಯಕ್ಷ ಬಾವಾ ಇಸ್ಮಾಯಿಲ್, ಉಳ್ಳಾಲ ನಗರಸಭೆಯ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಉಳ್ಳಾಲ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹಮ್ಮದ್ ಮುಕ್ಕಚ್ಚೇರಿ, ಕೌನ್ಸಿಲರ್ ಸುಕುಮಾರ್, ಉಳ್ಳಾಲ ಪೇಟೆ ರಹ್ಮಾನಿಯಾ ಮಸೀದಿಯ ಅಧ್ಯಕ್ಷ ಮೊೈದಿನ್ ಹಸನ್, ದರ್ಗಾ ಸಮಿತಿ ಕಾರ್ಯದರ್ಶಿ ಯು.ಟಿ.ಇಲ್ಯಾಸ್, ಸದಸ್ಯ ಬುಖಾರಿ ಕಲ್ಲಾಪು, ಉಳ್ಳಾಲ ಸಮ್ಮರ್‍ಸ್ಯಾಂಡ್‍ನ ಮಾಲೀಕ ಅಲೋಶಿಯಸ್ ಅಲ್ಬುಕರ್ಕ್, ನಗರ ಸಭೆಯ ಸದಸ್ಯರಾದ ಪೆÇಡಿಮೋನು ಇಸ್ಮಾಯಿಲ್, ಹನೀಫ್ ಕೋಟೆಪುರ, ಜೀನ್ ಶಾಂತಿ, ಸುಂದರ ಉಳಿಯ, ಫತ್ಹಾಕ್, ಅಶ್ರಫ್ ಕೋಡಿ, ಕೌನ್ಸಿಲರ್ ಫಾರೂಕ್ ಉಳ್ಳಾಲ, ಮೇಲಂಗಡಿ ಜುಮಾ ಮಸೀದಿಯ ಉಪಾಧ್ಯಕ್ಷ ನಝೀರ್ ಬಾರ್ಲಿ, ಯು.ಕೆ. ಯೂಸುಫ್, ಯು.ಕೆ. ಮುಸ್ತಫಾ, ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾ„ಕಾರಿ ಡಾ. ಪುಷ್ಪಲತಾ, ಆಡಳಿತಾ„ಕಾರಿ ಡಾ. ಗೋಪಿಪ್ರಕಾಶ್, ಡಾ. ರಾಜೇಶ್, ಡಾ. ರತ್ನಾಕರ್, ಡಿಎಂಒ ಡಾ. ಅರುಣ್ ಕುಮಾರ್, ನಗರಸಭೆಯ ಕಿರಿಯ ಅಭಿಯಂತರರಾದ ರೇಣುಕಾ ಹಾಗೂ ದಿವಾಕರ್, ಎಇಇ ಎಂ. ರಘುಚಂದ್ರ ಹೆಬ್ಬಾರ್, ಸಹಾಯಕ ಎಂಜಿನಿಯರ್ ಆಶೋಕ್ ಕುಮಾರ್, ಗುತ್ತಿಗೆದಾರ ಕೃಷ್ಣೇಗೌಡ ಹಾಗೂ ಜನಾರ್ದನ ಬಾಬು ಉಪಸ್ಥಿತರಿದ್ದರು.

ಕೌನ್ಸಿಲರ್ ಮುಸ್ತಫಾ ಅಬ್ದುಲ್ಲ ಸ್ವಾಗತಿಸಿದರು. ಕೌನ್ಸಿಲರ್ ಯು.ಎ. ಇಸ್ಮಾಯಿಲ್ ಕಾರ್ಯಕ್ರಮ ನಿರೂಪಿಸಿದರು. ಎಂಜಿನಿಯರ್ ಅಹ್ಮದ್ ಬಾವಾ ಕೊಟ್ಟಾರ ವಂದಿಸಿದರು.

ಅವಿಭಜಿತ ದಕ್ಷಿಣ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ವೈದ್ಯರನ್ನು ನೇಮಿಸಲಾಗುವುದು.
ಯು.ಟಿ.ಖಾದರ್

Exit mobile version