Site icon Ullalavani

ಪ್ರಥಮ ವಾರ್ಷಿಕೋತ್ಸವ ಮತ್ತು ರಂಗ್ ತರಂಗ್-2016

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಸಮಾಜಕ್ಕೆ ಪೂರಕವಾಗುವ ಕೆಲಸದಲ್ಲಿ ಯುವಜನತೆ ಕಾರ್ಯ ನಡೆಸಿದಾಗ ಶಾಂತಿಯುತ ವಾತಾವರಣದ ಜತೆಗೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ತೊಕ್ಕೊಟ್ಟು ಪೆರ್ಮನ್ನೂರ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಪೆರ್ಮನ್ನೂರಿನ ಸಂತ ಸೆಬೆಸ್ತಿಯನ್ನರ ತೊಕ್ಕೊಟ್ಟು ಶಾಲಾ ಮೈದಾನದಲ್ಲಿ ಶುಕ್ರವಾರ ನಡೆದ ಪ್ರಥಮ ವಾರ್ಷಿಕೋತ್ಸವ ಮತ್ತು ರಂಗ್ ತರಂಗ್-2016 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸ್ಪೋಟ್ರ್ಸ್ ಕ್ಲಬ್ ಕಾರ್ಯ ಚಟುವಟಿಕೆ ಶ್ಲಾಘನೀಯ. ಯುವಜನತೆ ಐಕ್ಯತೆ, ಏಕತೆ, ಸಹೋದರತೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಶಾಂತಿಯುತ ವಾತಾವರಣ ನಿರ್ಮಿಸಲು ಸಾಧ್ಯ. ಹಿರಿಯರು, ಧಾರ್ಮಿಕ ಮುಖಂಡರು ಸಮಾಜದ ಆಸ್ತಿ ಸಂಪತ್ತಾಗಿದ್ದು, ಅವರ ಆದರ್ಶದಲ್ಲಿ ಎಲ್ಲರೂ ಬದುಕಬೇಕಿದೆ ಎಂದರು.

ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕನ್ಯಾನ ಜಳಂತಬೆಟ್ಟು ಸಂತ ಪೌಲ್ ಚರ್ಚಿನ ಧರ್ಮಗುರು ಫಾ.ಪೀಟರ್ ಸೆರಾವೋ, ಭಜರಂಗಿ ಭಾಯಿಜಾನ್ ಚಿತ್ರದ ಸಹ ನಿರ್ಮಾಪಕ ರಾಜೇಶ್ ಭಟ್, ಉಳ್ಳಾಲ ಪುರಸಭೆ ಮಾಜಿ ಅಧ್ಯಕ್ಷ ಬಾಜಿಲ್ ಡಿಸೋಜಾ, ತೊಕ್ಕೊಟ್ಟು ಪೆರ್ಮನ್ನೂರಿನ ಹೆರಾಲ್ಡ್ ಡಿಸೋಜ ಇವರನ್ನು ಸನ್ಮಾನಿಸಲಾಯಿತು.

ಆರ್ಥಿಕವಾಗಿ ಹಿಂದುಳಿದ ಎಂಟು ಕುಟುಂಬಳಿಗೆ ಆರ್ಥಿಕ ಸಹಾಯ ಧನ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರ್ಮನ್ನೂರು ಸಂತ ಸೆಬೆಸ್ತಿಯನ್ ಚರ್ಚಿನ ಧರ್ಮಗುರು ಫಾ.ಜೆ.ಬಿ. ಸಲ್ದಾನ ವಹಿಸಿದ್ದರು. ಈ ವೇಳೆ ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ, ಚಚ್ ್ ಪಾಲನಾ ಸಮಿತಿ ಉಪಾಧ್ಯಕ್ಷ ಲೂಕಸ್ ಡಿಸೋಜ, ಪೆರ್ಮನ್ನೂರು ಸ್ಪೋಟ್ರ್ಸ್ ಕ್ಲಬ್ ನ ಅಧ್ಯಕ್ಷ ರೋನ್ಸನ್ ಮೊಂತೇರೊ ಉಪಸ್ಥಿತರಿದ್ದರು.

Exit mobile version