ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ತೊಕ್ಕೊಟ್ಟುವಿನಿಂದ ಉಳ್ಳಾಲದ ಅಬ್ಬಕ್ಕ ವೃತ್ತದವರೆಗೆ ಮಾದರಿ ರಸ್ತೆಯನ್ನು ರಚಿಸುವ ಮೂಲಕ ಜನರಿಗೆ ನೀಡಿದ ಭಾಷೆಯನ್ನು ಉಳಿಸಲಾಗಿದ್ದು, ಮುಂದೆ ರಸ್ತೆಯನ್ನು ಸಂಪೂರ್ಣ ವಿದ್ಯುದ್ದೀಕರಣ ನಡೆಸಿ ಪಾದಚಾರಿಗಳು ನಡೆದುಕೊಂಡು ಹೋಗಲು ಅನುಕೂಲವಾಗುವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ಉಳ್ಳಾಲ ಅಬ್ಬಕ್ಕ ಸರ್ಕಲ್ ಬಳಿ ನೂತನ ಚತುಷ್ಪತ ರಸ್ತೆ ಕಾಂಕ್ರಟೀಕರಣ ಮತ್ತು ಅಬ್ಬಕ್ಕ ಸರ್ಕಲ್ ವಿಸ್ತರಣಾ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಆರೋಗ್ಯದ ಮಾಹಿತಿಗೆ ಈ-ಗವರ್ನೆನ್ಸ್ : ಪ್ರತಿ ಮನೆಮಂದಿಯ ಆರೋಗ್ಯದ ಬಗೆಗಿನ ಮಾಹಿತಿಯನ್ನು ಕಂಪ್ಯೂಟರ್ ಮೂಲಕ ಪಡೆಯಲು ಮತ್ತು ದಾಖಲಿಸುವ ಸಲುವಾಗಿ ಸರಕಾರ ಈಗಾಗಲೇ ಈ-ಗವರ್ನೆನ್ಸ್ ಯೋಜನೆಗೆ ಅನುಮೋದನೆ ನೀಡಿ ಶೀಘ್ರದಲ್ಲೇ ಚಾಲನೆ ನೀಡಲಿದ್ದು, ಈ ಮೂಲಕ ಪ್ರತಿಯೋರ್ವರ ಆರೋಗ್ಯದ ಬಗೆಗಿನ ಮಾಹಿತಿ ಮತ್ತು ಚಿಕಿತ್ಸೆ ಪಡೆಯಲು ವ್ಯವಸ್ಥೆ ಸಹಕಾರಿಯಾಗಲಿದೆ. ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ 4 ಕೋಟಿ 95 ಲಕ್ಷ.ರೂ ವೆಚ್ಚದಲ್ಲಿ ಸುಸಜ್ಜಿತ ಅಬ್ಬಕ್ಕ ಭವನ ನಿರ್ಮಾಣವಾಗಲಿದ್ದು, 600 ಸೀಟಿನ ಮತ್ತು ಹವಾನಿಯಂತ್ರಿತ ಸಭಾಭವನದಲ್ಲಿ ಬಡ ವರ್ಗದವರಿಗೂ ಅನುಕೂಲವಾಗುವ ವ್ಯವಸ್ಥೆ ಮಾಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ನಗರಸಭಾ ಉಪಾಧ್ಯಕ್ಷೆ ರಝೀಯಾ ಇಬ್ರಾಹಿಂ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್.ಹಂಝ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್, ಮಾಜಿ ಅದ್ಯಕ್ಷ ಸದಾನಂದ ಬಂಗೇರ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಉಳ್ಳಾಲ್, ಭಗವತೀ ಕ್ಷೇತ್ರ ಉಳ್ಳಾಲ ಇದರ ಉಪಾಧ್ಯಕ್ಷ ಸುರೇಶ್ ಭಟ್ನಗರ, ಬಿಜೆಪಿ ಹಿರಿಯ ಮುಖಂಡ ಸೀತಾರಾಮ ಬಂಗೇರ, ಉಳ್ಳಾಲ ಮಂಡಲ ಪಂಚಾಯತ್ ಮಾಜಿ ಸದಸ್ಯ ರವೀಂದ್ರ ರಾಜ್ ಉಳ್ಳಾಲ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಮ್ಮದ್ ಮುಕ್ಕಚ್ಚೇರಿ, ರೂಪಾ ಶೆಟ್ಟಿ, ಕಿರಿಯ ಅಭಿಯಂತರ ರೇಣುಕಾ, ಪಿಡಬ್ಲ್ಯುಡಿ ಇಂಜಿನಿಯರ್‍ಗಳಾದ ಹೆಗಡೆ, ಉಳ್ಳಾಲ ನಗರಸಭಾ ಕೌನ್ಸಿಲರ್‍ಗಳಾದ ಮುಸ್ತಾಫ ಅಬ್ದುಲ್ಲಾ, ಫಾರೂಕ್ ಉಳ್ಳಾಲ್, ದಿನೇಶ್ ರೈ, ಪೆÇಡಿಮೋನು ಇಸ್ಮಾಯಿಲ್, ಹನೀಫ್ ಕೋಟೆಪುರ, ಸುಂದರ್ ಉಳಿಯ, ಉಸ್ಮಾನ್ ಕಲ್ಲಾಪು, ಗುತ್ತಿಗೆದಾರ ನಾಗೇಶ್ ಶೆಟ್ಟಿ, ಆಯೂಬ್ ಉಳ್ಳಾಲ್ ರಾಝಿಕ್ ಉಳ್ಳಾಲ್, ಮೆಸ್ಕಾಂ ಇಂಜಿನಿಯರ್‍ಗಳಾದ ಅಹ್ಮದ್‍ಬಾವ ಕೊಟ್ಟಾರ ಸ್ವಾಗತಿಸಿದರು. ಉಳ್ಳಾಲ ಪುರಸಭಾ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಕಾರ್ಯಕ್ರಮ ನಿರ್ವಹಿಸಿದರು. ಅಬ್ದುಲ್ ಫತ್ತಾಕ್ ವಂದಿಸಿದರು.