ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಬಂಟ್ವಾಳ: ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಮಂಗಳೂರು ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಯ ವಿದ್ಯಾರ್ಥಿಗಳ ವತಿಯಿಂದ ಬಂಟ್ವಾಳದ ತೆಂಕಕಜೆಕಾರು ಕರ್ಲ ದ.ಕ.ಜಿ.ಪಂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರದಿಂದ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರ 2015-16 ರಲ್ಲಿ ಮಂಗಳವಾರ ಕಜೆಕಾರು ಶ್ರೀ ಮಹಾದೇವದೇವೇಶ್ವರ ದೇವಸ್ಥಾನದಲ್ಲಿ ನಡೆದ ಬೆಳಕಿನ ಹಬ್ಬ-ಆಧ್ಯಾತ್ಮದ ಪರಿಕಲ್ಪನೆ ಕಾರ್ಯಕ್ರಮ ಗಮನ ಸೆಳೆಯಿತು.