Site icon Ullalavani

ನರ್ಮ್ ಬಸ್ ಮುಡಿಪಿನ ಕನಸು ನನಸು

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ:ಗ್ರಾಮಾಂತರ ಪ್ರದೇಶದ ಜನರಿಗೆ ಪ್ರಯಾಣಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ನರ್ಮ್ ಆಶ್ರಯದಲ್ಲಿ ನಗರದಿಂದ ೨೦ಕಿಮೀ ಪರಿಧಿಯಲ್ಲಿ ಸಂಚರಿಸಲು ೩೫ ಬಸ್ಸುಗಳಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು ಇದೀಗ ಈ ಯೋಜನೆಯಡಿಯಲ್ಲಿ ಮುಡಿಪುಗೆ ಹೊಸ ಬಸ್ಸು ಸಂಚಾರ ಶುರುವಾಗುವ ಮೂಲಕ ಮುಡಿಪು ಜನತೆಯ ಕನಸು ನನಸಾಗಿದೆ.

ಸ್ಟೇಟ್ ಬ್ಯಾಂಕಿನಿಂದ ತೊಕ್ಕೊಟ್ಟು, ಕುತ್ತಾರು, ದೇರಳಕಟ್ಟೆಯ ಮೂಲಕ ಸಾಗುವ ಈ ಬಸ್ ಗೆ ಸತೀಶ್ ಶೆಟ್ಟಿ ಚಾಲನೆ ನೀಡಿದರು.

ಮುಖ್ಯ ಅತಿಥಿಯಾಗಿ ಜಗದೀಶ್ ಆಳ್ವ, ದೇವದಾಸ್ ಆಳ್ವ, ವಿಠಲ ಶೆಟ್ಟಿ, ಹೆಚ್. ಕೆ. ಮುಡಿಪು ಭಾಗವಹಿಸಿದ್ದರು.

ಹೋರಾಟಗಾರರಾದ ಇಸ್ಮಾಯಿಲ್ ಮುಡಿಪು, ಜಗದೀಶ್ ಎಂ, ಅಬ್ಬು ಎಜ್.ಕೆ.ಜೆ.ಉಮ್ಮರ್ ಲೈನ್ ಮೆನ್, ಸಿದ್ದಿಕ್ ಬೋಲೆರೋ,ಮತ್ತು ಮುಡಿಪಿನ ನಾಗರೀಕರು ಉಪಸ್ಥಿತರಿದ್ದರು.

Exit mobile version