Site icon Ullalavani

ಮಾಧ್ಯಮ ತ್ರಿಶಂಕು ಸ್ಥಿತಿಯಲ್ಲಿದೆ:ನಳಿನ್ ಕುಮಾರ್ ಕಟೀಲು

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ತಂತ್ರಜ್ಞಾನದ ವೇಗಕ್ಕೆ, ಸಾಮಾಜಿಕ ಜಾಲತಾಣಗಳಲ್ಲಿ ಆದರಲ್ಲೂ ವಾಟ್ಸ್‍ಆ್ಯಪ್ ಹಾಗೂ ಫೇಸ್‍ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಿಪ್ರಗತಿಯಲ್ಲಿ ಹರಿದಾಡುವ ಸುದ್ದಿಗಳಿಂದಾಗಿ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮ ತ್ರಿಶಂಕು ಸ್ಥಿತಿಯಲ್ಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅಭಿಪ್ರಾಯಪಟ್ಟರು.

ಅವರು ತೊಕ್ಕೊಟ್ಟು ಕಾಪಿಕಾಡಿನ ಅಂಬಿಕಾರೋಡಿನಲ್ಲಿರುವ ಗಟ್ಟಿ ಸಮಾಜಭವನದಲ್ಲಿ ಶನಿವಾರ ತೊಕ್ಕೊಟ್ಟಿನ ಪೆÇಸಕುರಲ್ ಬಳಗದ ಆಶ್ರಯದಲ್ಲಿ ನಡೆದ ಪೋಸಕುರಲ್ ದೃಶ್ಯ ಮಾಧ್ಯಮದ 12ನೆಯ ವಾರ್ಷಿಕ ಸಮಾರಂಭ ಉದ್ಘಾಟಿಸಿ ಹದಿಮೂರು ಮಂದಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಹದಿನೈದು ವರುಷಗಳ ಹಿಂದೆ ಒಂದು ಸುದ್ದಿ ಜನರಿಗೆ ತಿಳಿಯಲು ರೇಡಿಯೋ, ಪತ್ರಿಕೆ ಹಾಗೂ ಟಿವಿ ಜನರಿಗೆ ಬಹಳ ಹತ್ತಿರದ ಮಾಧ್ಯಮವಾಗಿತ್ತು. ಆದರೆ ಈಗ ಕೈಬೆರಳ ತುದ್ದಿಯಲ್ಲಿ ಸುದ್ದಿಯನ್ನು ತಿಳಿಯಲು ಸಾಧ್ಯವಾಗಿದೆ. ಅದು ತಂತ್ರಜ್ಞಾನದ ಪ್ರಭಾವವಾದರೆ ತುಳು ಭಾಷೆಯ ಮೂಲಕ ತುಳುನಾಡಿನ ಎಲ್ಲ ಧರ್ಮಗಳ ಸಂಸ್ಕಾರ ಸಂಸ್ಕøತಿ ಉಳಿಸಿ ಬೆಳೆಸುವ ಕೆಲಸವನ್ನು ಪೆÇಸಕುರಲ್ ಮಾಡುತ್ತಾ ಬಂದಿದೆ. ಸಮಾಜವೇ ಸಮಸ್ಯೆಯಲ್ಲಿ ಇರುವಾಗ ಪೋಸಕುರಲ್ ಮಾತ್ರ ಕರ್ತವ್ಯ ನಿರ್ವಹಣೆಯಲ್ಲಿ ಶ್ಲಾಘನೀಯ ಕಾರ್ಯ ಮಾಡಿದೆ ಎಂದರು.

ಒಂದು ಉತ್ತಮ ಸಮಾಜದಲ್ಲಿ ಸಾಮರಸ್ಯ ಸೌಹಾರ್ದತೆ ಅತಿ ಮುಖ್ಯಾವಗುತ್ತದೆ. ಆ ನಿಟ್ಟಿನಲ್ಲಿ ಪೆÇಸಕುರಲ್ ಮಾಧ್ಯಮದಿಂದ ಸಾಹಾರ್ದತೆ ಹಾಗೂ ಸಾಮರಸ್ಯ ಕಾಪಾಡಲು ಸಾಧ್ಯವಾಗಿದೆ ಎಂದು ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್ ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರು, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಧರ್ಮಜಾಗೃತಿ ವೇದಿಕೆ ಕಾಸರಗೋಡು ಅಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಸೂರಜ್ ಇಂಟರ್ ನ್ಯಾಷನಲ್‍ನ ಅಧ್ಯಕ್ಷ ಡಾ. ಮಂಜುನಾಥ ರೇವಣ್‍ಕರ್, ಪೆರ್ಮನ್ನೂರಿನ ಸಂತ ಸೆಬೆಸ್ಟಿಯನ್ ಚರ್ಚ್‍ನ ಧರ್ಮಗುರು ಫಾ. ಜೆ.ಬಿ. ಸಲ್ದಾನಾ, ವಕ್ಪ್ ಬೋರ್ಡ್‍ನ ಜಿಲ್ಲಾ ಮಾಜಿ ಉಪಾಧ್ಯಕ್ಷ ಡಾ. ಮುನೀರ್ ಬಾವಾ, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಪ್ಪ ಸಾಲಿಯಾನ್, ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಕಾಪಿಕಾಡು ಶ್ರೀ ಉಮಾ ಮಹೇಶ್ವರೀ ದೇವಸ್ಥಾನದ ಮೊಕ್ತೇಸರ ಈಶ್ವರ್ ಉಳ್ಳಾಲ್, ಜಿಲ್ಲಾ ಧಾರ್ಮಿಕ ಪರಿಷತ್‍ನ ಸದಸ್ಯ ಕೃಷ್ಣ ಗಟ್ಟಿ ಕೋಟೆಕಾರು, ಕೋಟೆಕಾರು ಸಿದ್ಧಿ ವಿನಾಯಕ ಮಂದಿರದ ಮಹಾಪೆÇೀಷಕ ರಾಮಣ್ಣ ಶೆಟ್ಟಿ ಮುಂಬಯಿ, ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರೀ ಕ್ಷೇತ್ರದ ಧರ್ಮದರ್ಶಿ ಭಾಸ್ಕರ ಐತಾಳ್, ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಟಿ.ಎಸ್. ಅಬ್ದುಲ್ಲ, ಸುಗ್ಗಿ ಸೌಹಾರ್ದ ಸಹಕಾರಿ ಸಂಘದ ಆಡಳಿತ ನಿರ್ದೇಶಕ ಅನಿಲ್‍ದಾಸ್, ಪೆÇಸಕುರಲ್ ಮಹಿಳಾ ಬಳಗದ ಸುಹಾಸಿನಿ ಬಬ್ಬುಕಟ್ಟೆ, ಉಳ್ಳಾಲ ನಗರ ಪಂಚಾಯಿತಿ ಸದಸ್ಯ ದಿನೇಶ್ ರೈ, ಉದ್ಯಮಿ ವಿನ್ಸೆಂಟ್ ನಝರತ್, ಚಂದ್ರಶೇಖರ್ ಹೆನ್ನಾಳ, ಪೆÇಲದವರ ಯಾನೆ ಗಟ್ಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಶಿವಾನಂದ ಕಾಚಾರ್, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಉಪಾಧ್ಯಕ್ಷ ಸುರೇಶ್ ಭಟ್ನಗರ ಹಾಗೂ ಉಚ್ಚಿಲ ಜೀವಾನಂದ ಗುರೂಜಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸೌಹಾರ್ದ ನೇತ್ರಾವತಿ ಹೋರಾಟಗಾರ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಸಾಂಸ್ಕøತಿಕ ಸಂಘಟಕ ಭರತ್ ಉಳ್ಳಾಲ್, ಧಾರ್ಮಿಕ ಸೇವಕ ಕೃಷ್ಣಗಟ್ಟಿ, ಧಾರ್ಮಿಕ ಹಾಗೂ ಸಾಮಾಜಿಕ ಸೇವಕ ದಿವಾಕರ ಬಗಂಬಿಲ, ತುಳುನಾಡ ಸಂಘಟನಾ ಹೋರಾಟಗಾರ ಯೋಗೀಶ್ ಶೆಟ್ಟಿ eಪ್ಪು, ಸಮಾಜ ಸೇವಕ ರಾಝಿಕ್ ಉಳ್ಳಾಲ್, ಮಾಧ್ಯಮ ಕ್ಷೇತ್ರದಲ್ಲಿನ ಸೇವೆಗಾಗಿ ಪತ್ರಿಕಾ ಛಾಯಾಗ್ರಾಹಕ ರಾಮಚಂದ್ರ ಭಟ್, ಸಂಘಟಕ ಫ್ರಾಂಕಿ ಫ್ರಾನ್ಸಿಸ್ ಕುಟ್ಟಿನ್ಹ, ಸ್ವಚ್ಛತಾ ಆಂಧೋಲನ ಸೇವೆಗಾಗಿ ಉದಯ ಗಟ್ಟಿ ಪಿಲಾರು ಹಾಗೂ ಮಾಧ್ಯಮ ಸೇವೆಗಾಗಿ ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾೈ ಅವರನ್ನು ಸನ್ಮಾನಿಸಲಾಯಿತು.

ಪ್ರವೀಣ್ ಎಸ್. ಕುಂಪಲ, ಮೋಹನ್ ಶಿರ್ಲಾಲು ಹಾಗೂ ಪ್ರಭಾಕರ ಕೊಲ್ಯ ಕಾರ್ಯಕ್ರಮ ನಿರೂಪಿಸಿದರು. ಪೆÇಸಕುರಲ್ ಆಡಳಿತ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಸ್ವಾಗತಿಸಿ ಪ್ತಾಸ್ತಾವಿಕ ಮಾತುಗಳನ್ನಾಡಿ ವಂದಿಸಿದರು.

ಕಾರ್ಯಕ್ರಮದ ಆಂಗವಾಗಿ ಕಾಪಿಕಾಡಿನ ಶ್ರೀ ಉಮಾಮಹೇಶ್ವರೀ ಸಿಂಗಾರಿ ಮೇಳದ ಸದಸ್ಯರಿಂದ ಸಾಂಸ್ಕøತಿಕ ನೃತ್ಯವೈಭವ, ಚೆಂಡೆವಾದನ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ, ಚಂದ್ರಹಾಸ ಮುಗುಳ್ಯ ಅವರಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಾಯೋಜಕತ್ವದಲ್ಲಿ ಕುಂಜತ್ತೂರು ಕಣ್ವತೀರ್ಥದ ಶ್ರೀ ದತ್ತಾಂಜನೇಯ ಕಲಾಬಳಗದಿಂದ ತುಳುನಾಡ ವೈಭವ ಸಾಂಸ್ಕøತಿಕ ಮನರಂಜನೆ ಕಾರ್ಯಕ್ರಮ ಪ್ರದರ್ಶನ ನಡೆಯಿತು.

Exit mobile version