ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಪಜೀರು: ಪಜೀರು ಮೆರ್ಸಿಯಮ್ಮನವರ ಇಗರ್ಜಿ ಹಾಗೂ ಕೆಥೊಲಿಕ್ ಸಭಾ ಪಜೀರು ಘಟಕದ ವತಿಯಿಂದ ಕಿಡ್ನಿ ವೈಫಲ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ಮುಂಡೋಳಿಯ ಸುಪ್ರಿಯಾ ಅವರಿಗೆ ಸಹಾಯಧನ ನೀಡಲಾಯಿತು.
ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ವಿಕ್ಟರ್ ಮೊಂತೆರೋ, ಕಾರ್ಯದರ್ಶಿ ಫೆಲಿಕ್ಸ್ ಮೊಂತೆರೋ, ಸಂತ ವಿನ್ಸೆಟ್ ಪಾವುಲ್ ಸೊಸೈಟಿಯ ಅಧ್ಯಕ್ಷ ಮೈಕೆಲ್ ಲೋಬೋ, ಜಾನ್ ಎಂ.ವಿಕ್ಟರ್ ಸಲ್ದಾನಾ, ಬ್ರ.ಲ್ಯಾನ್ಸನ್ ಪಿಂಟೋ, ಕೆಥೋಲಿಕ್ ಸಭಾ ಕೇಂದ್ರೀಯ ಘಟಕ ಅಧ್ಯಕ್ಷೆ ಪ್ಲೇವಿ ಡಿಸೋಜ, ಪಜೀರು ಘಟಕ ಅಧ್ಯಕ್ಷ ಹಿಲರಿ ಡಿಸೋಜ, ಕಾರ್ಯದರ್ಶಿ ಅವಿಲ್ ಡಿಸೋಜ, ಕೆಥೊಲಿಕ್ ಸಭಾ ಪ್ರಾಂತ್ಯ ಅಧ್ಯಕ್ಷ ವಿನ್ಸೆಂಟ್ ಡಿಸೋಜ ಧರ್ಮತೋಟ, ಪ್ರಮುಖರಾದ ಲವಿನಾ ದಾಂತಿ, ಲೋಯ್ ಡಿಸೋಜ, ವಿನಿತಾ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.