Site icon Ullalavani

ಸೋನಿಯಾ ಹಾಗೂ ರಾಹುಲ್ 2016ರಲ್ಲಿ ಜೈಲಿಗೆ ಹೋಗುವುದು ನಿಶ್ಚಿತ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ನವ ದೆಹಲಿ :ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ 2016ರಲ್ಲಿ ಜೈಲಿಗೆ ಹೋಗುವುದು ನಿಶ್ಚಿತ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯನ್‌ ಸ್ವಾಮಿ ಹೇಳಿಕೆ ನೀಡಿದ್ದಾರೆ.

ಆಜ್‌ ತಕ್‌ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಸುಬ್ರಹ್ಮಣ್ಯನ್‌ ಸ್ವಾಮಿ ಅವರು ಭಾರತದ ನ್ಯಾಯಾಂಗದಲ್ಲಿ ತನಗೆ ವಿಶ್ವಾಸವಿದೆ ಎಂದರು.

“ಕಾಂಗ್ರೆಸ್‌ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಒಬ್ಬ ಬುದ್ಧು; ಆತನಿಗೆ ಯಾವುದೇ ಭವಿಷ್ಯ ಇಲ್ಲ ‘ಸೋನಿಯಾ ಗಾಂಧಿ ಮತ್ತು ಆಕೆಯ ಪುತ್ರ ರಾಹುಲ್‌ ಗಾಂಧಿಗೆ ಸುಳ್ಳು ಹೇಳುವುದು ಹುಟ್ಟುಗುಣವಾಗಿದ್ದು ಅವರು ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ಕೂಡ ಸುಳ್ಳು ಹೇಳಿಕೊಂಡು ಬಂದಿದ್ದಾರೆ’ ಎಂದು ಹೇಳಿದರು.

ನ್ಯಾಷನಲ್‌ ಹೆರಾಲ್ಡ್‌ ಕೇಸಿಗೆ ಸಂಬಂಧಪಟ್ಟು ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರು ನೀಡಿರುವ ಮಾಧ್ಯಮ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸ್ವಾಮಿ,ನ್ಯಾಷನಲ್‌ ಹೆರಾಲ್ಡ್‌ ಕೇಸಿಗೆ ಸಂಬಂಧಿಸಿ ನನಗೆ ಬಿಜೆಪಿಯಿಂದ ಯಾವುದೇ ರೀತಿಯ ಬೆಂಬಲ ಬೇಕಾಗಿಲ್ಲ.ಈ ಕೇಸಿನ ಬಗ್ಗೆ ನಾನು ಈ ತನಕ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅಥವಾ ಆರ್‌ಎಸ್‌ಎಸ್‌ ಜತೆಗೆ ಯಾವುದೇ ಮಾತುಕತೆ ನಡೆಸಿಲ್ಲ.

Exit mobile version