Site icon Ullalavani

ದಿಲ್ ವಾಲೆ ಚಿತ್ರಕ್ಕೆ ಅಡ್ಡಿ: ಬಜರಂಗಿಗಳ ವಿರುದ್ಧ FIR

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮಂಗಳೂರು: ದಿಲ್ ವಾಲೆ ಸಿನಿಮಾ ವೀಕ್ಷಣೆಗೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಬಜರಂಗದಳದ ಮುಖಂಡ ಮತ್ತು ಕಾರ್ಯಕರ್ತರ ಮೇಲೆ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್ ದೂರು ನೀಡಿದ ಬಗ್ಗೆ  ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್ ಮತ್ತು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.

ಶಾರೂಕ್ ಖಾನ್ ದೇಶದ್ರೋಹಿ ಎಂದು ಆರೋಪಿಸಿ ಭಾನುವಾರ ನಗರದ ಪಾಂಡೇಶ್ವರದ ಪಿವಿಆರ್ ಚಿತ್ರಮಂದಿರದಲ್ಲಿ ದಿಲ್ ವಾಲೆ ಚಿತ್ರವನ್ನು ನಿಲ್ಲಿಸುವಂತೆ ಬಜರಂಗಿಗಳು ಒತ್ತಾಯಿಸಿದ್ದು ನಂತರ ಪ್ರದರ್ಶನವನ್ನು ನಿಲ್ಲಿಸಲಾಗಿತ್ತು.

Exit mobile version