Site icon Ullalavani

ಉಳ್ಳಾಲ:ವಿದ್ಯಾರ್ಥಿ ಅಪಹರಣ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಶಾಲೆಗೆ ಹೋದ ಬಾಲಕನನ್ನು ತಂಡವೊಂದು ಅಪಹರಿಸಿರುವ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಳ್ಳಾಲ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ ಮಹಮ್ಮದ್ ರಾಶೀದ್ ಅಪಹರಣಕ್ಕೊಳಗಾದ ವಿದ್ಯಾರ್ಥಿ. ಡಿ.16 ರಂದು ಮನೆಯಿಂದ ಶಾಲೆಗೆ ತೆರಳಿದವನು ಮನೆಗೆ ವಾಪಸ್ಸು ಬಂದಿರಲಿಲ್ಲ. ಈ ಬಗ್ಗೆ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದರೂ ಬಾಲಕನ ಪತ್ತೆಯಾಗಿರಲಿಲ್ಲ. ಕಿಡಿಗೇಡಿಗಳು ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುವ ಸಾಧ್ಯತೆ ಇರುವುದಾಗಿ ಉಳ್ಳಾಲ ಠಣೆಯಲ್ಲಿ ದೂರು ನೀಡಿದ್ದಾರೆ.

Exit mobile version