ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಅಜ್ಜಿನಡ್ಕ: ಪರವಾನಿಗೆ ಇಲ್ಲದೆ ಕೇರಳ ರಾಜ್ಯಕ್ಕೆ ಮರಳು ಸಾಗಾಟ ನಡೆಸುತ್ತಿದ್ದ ಎರಡು ಲಾರಿಗಳನ್ನು ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಉಳ್ಳಾಲ ಪೊಲೀಸರು ತಪಾಸಣೆ ನಡೆಸುತ್ತಿದ್ದ ಸಂದರ್ಭ ಅಜ್ಜಿನಡ್ಕ ಬಳಿ ಲಾರಿಯನ್ನು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಲಾ 14 ಟನ್ ನಂತೆ ಎರಡು ಲಾರಿಗಳಲ್ಲಿ 28 ಟನ್ ಮರಳು ಇತ್ತು. ಒಟ್ಟು 9,50,000 ಬೆಲೆಯ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಲಾರಿ ಚಾಲಕ ಜೋನಿ(48), ವಿ.ತಂಗವೇಲು(48) ಹಾಗೂ ಕೆ.ಸಿರೋಡಿನ ಅಶ್ಫಾಕ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರು ಮರಳು ಕಳವು ನಡೆಸಿ ಸಾಗಾಟ ಮಾಡುತ್ತಿದ್ದರು.