ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಪಜೀರು ಚರ್ಚ್ ಹಾಗೂ ಇನ್ನಿತರ ಕಡೆಗಳಲ್ಲಿ ಕಳ್ಳತನ ನಡೆಸಿದ್ದ ಆರೋಪಿಯೊರ್ವನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಈತ ಪಜೀರಿನ ಚರ್ಚ್‍ಗೆ ನುಗ್ಗಿ ಕಳ್ಳತನ ನಡೆಸಿದ್ದು ಮಾತ್ರವಲ್ಲದೆ ದೇರಳಕಟ್ಟೆ ಮೊಬೈಲ್ ಹಾಗೂ ಫ್ಯಾನ್ಸಿ ಅಂಗಡಿಗಳಿಗೆ ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ಕಳ್ಳತನ ನಡೆಸಿ ತಲೆಮರೆಸಿಕೊಂಡಿದ್ದನು. ಚರ್ಚ್‍ಗೆ ನುಗ್ಗಿ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಜರುದ್ದೀನ್, ಮುಷ್ತಾಕ್ ಹಾಗೂ ಅಫ್ರೀಝ್ ಎಂಬವರನ್ನು ಕಳೆದ ಕೆಲವು ದಿನಗಳ ಹಿಂದೆಯೇ ಬಂಧಿಸಿದ್ದರು. ಬಳಿಕ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಜಾಫರ್ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಈತನ ಬಳಿ ಇದ್ದ ಆ ಮೊಬೈಲ್, ಪ್ಯಾನ್ಸಿ ಸಾಮಾಗ್ರಿ ಹಾಗೂ ಚರ್ಚ್‍ನಲ್ಲಿ ಕಳ್ಳತನ ನಡೆಸಿದ ಕೆಲವು ಪೂಜಾ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಬಂಧಿತ ಆರೋಪಿಯಿಂದ ಕಳ್ಳತನ ನಡೆಸಿದ್ದ ಎರಡು ಬೈಕ್‍ಗಳನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ. ಈತನ ತಂಡದಲ್ಲಿದ್ದು ಕಳ್ಳತನ ನಡೆಸಿ ಪರಾರಿಯಾಗಿರುವ ಮೂವರು ಆರೋಪಿಗಳ ಪತ್ತೆಗಾಗಿ ಕೊಣಾಜೆ ಪೊಲೀಸರು ಬಲೆ ಬೀಸಿದ್ದಾರೆ.