Site icon Ullalavani

ಉಳ್ಳಾಲ: ನಾಳೆಯಿಂದ ಕೆಎಸ್‍ಆರ್‍ಟಿಸಿ ಬಸ್ಸು ಪ್ರಾರಂಭ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ನರ್ಮ್ ಆಶ್ರಯದಲ್ಲಿ ನಗರದಿಂದ ೨೦ಕಿಮೀ ಪರಿಧಿಯಲ್ಲಿ ಸಂಚರಿಸಲು ೩೫ ಬಸ್ಸುಗಳಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು ಈ ನಿಟ್ಟಿನಲ್ಲಿ ನಾಳೆಯಿಂದ ಉಳ್ಳಾಲ ಪ್ರದೇಶಗಳಿಗೆ ಮೂರು ಕೆಎಸ್‍ಆರ್‍ಟಿಸಿ ಬಸ್ಸುಗಳ ಸಂಚಾರ ಆರಂಭವಾಗಲಿದೆ ಎಂದು ಕೆಎಸ್‍ಆರ್‍ಟಿಯ ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ.

ಫೈಲ್ ಚಿತ್ರ

ಸ್ಟೇಟ್‍ಬ್ಯಾಂಕ್‍ನಿಂದ ಬೀರಿ, ಮಾಡೂರು, ಮಡ್ಯಾರ್ ರಸ್ತೆಯಿಂದ ಮುಡಿಪಿನ ವರೆಗೂ ಕೆಎಸ್‍ಆರ್‍ಟಿಸಿ ಬಸ್ಸು ಸಂಚರಿಸಲಿದ್ದು, ಸ್ಟೇಟ್‍ಬ್ಯಾಂಕಿನಿಂದ ಸೋಮೆಶ್ವರ ಮಾರ್ಗದ ಮೂಲಕ ಸಂಚಾರಿಸಲಿದೆ.

ನಾಳೆಯಿಂದ ಗ್ರಾಮಾಂತರ ಪ್ರದೇಶಗಳಿಗೆ ಎರಡು ಬಸ್ಸುಗಳ ಆರಂಭವಾಗಲಿದ್ದು ಬಳಿಕ ಎರಡು ದಿನಗಳ ನಂತರ ಮತ್ತಷ್ಟು ಬಸ್ಸುಗಳು ರಸ್ತೆಗಿಳಿಯಳಿವೆ. ಪೂರಕ ಸೌಕರ್ಯ ಒದಗಿಸುವ ಅನುಕೂಲವಾಗಲು ಪ್ರಥಮ ಹಂತದಲ್ಲಿ ಪರವಾನಿಗೆ ಪಡೆದಿರುವ ೧೭ ಬಸ್ಸುಗಳನ್ನು ಹಂತ ಹಂತವಾಗಿ ಆರಂಭಿಸಲಾಗುವುದು. ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಹೊಸ ಬಸ್ ಸೇವೆ ಆರಂಭಿಸುವ ಸಂದರ್ಭದಲ್ಲಿ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

Exit mobile version