ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮಂಗಳೂರು: ಲಯನ್ಸ್ ಕ್ಲಬ್ ಲಿಯೋ ಲಯನೆಸ್ ಕ್ಲಬ್ ಲಿಯೋ ಮಂಗಳೂರು, ದ.ಕ.ಜಿಲ್ಲಾ ಗೃಹರಕ್ಷಕದಳ, ಚೂಂತಾರು ಸರೋಜಿನಿ ಭಟ್ ಪ್ರತಿಸ್ಠಾನ (ರಿ) ಮಂಗಳೂರು ಮತ್ತು ಮುನೀಶ್ವರ ಮಹಾಗಣಪತಿ ದೇವಸ್ಥಾನ ಆಡಳಿತ ಮಂಡಳಿ ಇವರ ಪ್ರಾಯೋಜಕತ್ವದಲ್ಲಿ ತೇಜಸ್ವಿನಿ ಆಸ್ಪತ್ರೆ ರಕ್ತನಿಧಿ ಇವರ ಸಹಕಾರದೊಂದಿಗೆ ‘ಗೃಹರಕ್ಷಕರ ದಿನ’ ದ ಅಂಗವಾಗಿ ರಕ್ತದಾನ ಶಿಬಿರವು ಮಂಗಳೂರಿನ ಶ್ರಿ ಮುನೀಶ್ವರ ಮಹಾಗಣಪತಿ ದೇವಾಲಯದ ಸಭಾಂಗಣದಲ್ಲಿ ನಡೆಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಅರವಿಂದ್ ಕಿಣಿ ಮತ್ತು ಕಾರ್ಯದರ್ಶಿ ಗಳಾದ ಮೋನಪ್ಪ ಶೆಟ್ಟಿ ಲಯನೆಸ್ ಅಧ್ಯಕ್ಷರಾದ ಹೇಮಾ ರಾವ್ ತೇಜಸ್ವಿನಿ ಆಸ್ಪತ್ರೆಯ ಸಂಯೋಜಕರಾದ ಕೆ ಪ್ರಬಾಕರ್ ರಾವ್ ಪೊಲೀಸ್ ಲೇನ್ ಮಹಾಗಣಪತಿ ದೇವಸ್ಥಾನದ ಆಡಳಿತ ಮಂಡಳಿಯ ಉಪಾದ್ಯಕ್ಷರಾದ ಹರಿಶ್ಚಂದ್ರ ಕುಂಬ್ಳೆ ಮತ್ತು ಕೋಶಾಧಿಕಾರಿ ದಯಾನಂದ ಉಪಸ್ಥಿತರಿದ್ದರು.
ಗೃಹರಕ್ಷಕದಳದ ಉಪಸಮಾದೇಷ್ಟರಾದ ರಮೇಶ್ ಕಾರ್ಯಕ್ರಮ ನಿರ್ವಹಿಸಿದರು ಸುಮಾರು 25 ಕ್ಕಿಂತಲೂ ಹೆಚ್ಚು ಗೃಹರಕ್ಷಕರು ರಕ್ತದಾನ ನೀಡಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.