Site icon Ullalavani

ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಕಂಪನ

ನವದೆಹಲಿ:ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಲಘು ಭೂಕಂಪನ ಸಂಭವಿಸಿದ್ದು, ತಜಿಕಿಸ್ತಾನ್ ನಲ್ಲಿ 7.2ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದ ಬಗ್ಗೆ ವರದಿಯಾಗಿದೆ.

ಹಿಂದುಖುಷ್ ಪರ್ವತ ಶ್ರೇಣಿಯಲ್ಲಿ ಭೂಕಂಪದ ಕೇಂದ್ರಬಿಂದುವಾಗಿದ್ದು, ರಿಕ್ಟರ್ ಮಾಪಕದಲ್ಲಿ  7.2ರಷ್ಟು ತೀವ್ರತೆಯಲ್ಲಿ ಕಂಪನ ಸಂಭವಿಸಿದೆ.

ಭೂಕಂಪದಿಂದ ಇದುವರೆಗೂ ಯಾವುದೇ ರೀತಿಯ ಸಾವು ಸಂಭವಿಸಿಲ್ಲ. ನೆರೆಯ ಪಾಕಿಸ್ತಾನದ ಕೆಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಬಗ್ಗೆ ವರದಿಯಾಗಿದೆ.
ದೆಹಲಿ, ಶ್ರೀನಗರ್,ಜಮ್ಮು-ಕಾಶ್ಮೀರ ಉತ್ತರಪ್ರದೇಶ್, ಪಂಜಾಬ್ ಸೇರಿದಂತೆ ಉತ್ತರ ಭಾರತಕ್ಕೂ ಭೂಕಂಪನದ ಬಿಸಿ ತಟ್ಟಿದೆ ಎಂದು ವರದಿ ವಿವರದಿಸಿದೆ.

Exit mobile version