ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ದಕ್ಷಿಣ ಕನ್ನಡ ಜಿಲ್ಲೆಯ ಜನರ ಜೀವನ ಶೈಲಿ ಇತರ ಎಲ್ಲರಿಗಿಂತ ಭಿನ್ನ. ಅದರಲ್ಲೂ ಆರೋಗ್ಯ ಸಂಬಂಧಿ ವಿಚಾರದಲ್ಲಿ ಸಾಮಾನ್ಯ ಜನರು ಕೂಡಾ ವಿಶೇಷ ನಿಲುವು ಹೊಂದಿರುತ್ತಾರೆ. ರೋಗಕ್ಕೆ ತುತ್ತಾದಾಗ ಸರಕಾರಿ ಆಸ್ಪತ್ರೆಯಲ್ಲಿ ಸಿಗುವ ಔಷಧಿ ಬಗ್ಗೆ ಒಂಥರಾ ನಿರಾಸಕ್ತಿ ಪ್ರದರ್ಶಿಸುತ್ತಾರೆ. ಜೇಬಿನಲ್ಲಿ ಕೇವಲ ಹತ್ತು ರೂ. ಗಳಿದ್ದರೂ ಧರ್ಮಾರ್ಥ ಸಿಗುವ ಔಷಧಿ ಬಗ್ಗೆ ಹೆಚ್ಚಿನ ನಂಬಿಕೆ ಇಟ್ಟಿರುವುದಿಲ್ಲ. ಧರ್ಮದ ಮದ್ದು ಧರ್ಮದ್ದೇ ಎಂಬ ಭಾವನೆ ಬೇರೂರಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ.ಎಸ್. ರಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಸಹಕಾರದೊಂದಿಗೆ ಮಂಗಳೂರಿನ ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್ ಸಹಕಾರದಲ್ಲಿ ನಡೆದ ಬಂಟ್ಸ್ ಕ್ಷೇಮ ಉಚಿತ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷೇಮ ಡೀನ್ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಕ್ಷೇಮ ಆರೋಗ್ಯ ವಿಮಾ ಯೋಜನೆಯ ಮಾಹಿತಿ ನೀಡಿ ಇದೊಂದು ಕುಟುಂಬ ಆರೋಗ್ಯ ವಿಮಾ ಯೋಜನೆಯಾಗಿದ್ದು ಕುಟುಂಬದ ಪತಿ, ಪತ್ನಿ, ಮೂರು ಮಕ್ಕಳು ಸೇರಿದಂತೆ ಗರಿಷ್ಠ ಐದು ಸದಸ್ಯರು ಯೋಜನೆಗೆ ಸೇರಬಹುದಾಗಿದ್ದು ತಂದೆ ತಾಯಿಯನ್ನು ಸೇರಿಸುವುದಾದರೆ ಹೆಚ್ಚುವರಿ ಕೇವಲ 150ರೂ. ಪಾವತಿಸಿ ಈ ಯೋಜನೆಗೆ ಸೇರಬಹುದು ಎಂದು ನುಡಿದರು.
ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಪತಿ ಪ್ರೊ.ಡಾ. ಎಂ.ಶಾಂತಾರಾಮ ಶೆಟ್ಟಿ, ನಿಟ್ಟೆ ವಿವಿ ಕುಲಸಚಿವ ಪ್ರೊ.ಡಾ.ಎಂ.ಎಸ್. ಮೂಡಿತ್ತಾಯ ಹಾಗೂ ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್‍ನ ಖಜಾಂಚಿ ಬಿ. ಸುದೇಶ್ ಕುಮಾರ್ ರೈ ಉಪಸ್ಥಿತರಿದ್ದರು.
ನ್ಯಾಷನಲ್ ಇನ್ಶೂರೆನ್ಸ್ ಆಫ್ ಇಂಡಿಯಾದ ಮಂಗಳೂರು ಶಾಖೆಯ ಸಹ ಪ್ರಬಂಧಕ ದಯಾನಂದ ಶೆಟ್ಟಿ ವಿಮಾ ಯೋಜನೆಯ ಕುರಿತು ಮಾಹಿತಿ ನೀಡಿದರು. ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್‍ನ ಕಾರ್ಯದರ್ಶಿ ಕೆ. ಜಯರಾಜ್ ರೈ ವಂದಿಸಿದರು. ಡಾ. ಸಾಯಿಗೀತಾ ಕಾರ್ಯಕ್ರಮ ನಿರೂಪಿಸಿದರು.
ಆರೋಗ್ಯವೇ ಭಾಗ್ಯ, ಕ್ಷೇಮ ಆರೋಗ್ಯ ವಿಮಾ ಯೋಜನೆ
*ಇದೊಂದು ಕುಟುಂಬ ಆರೋಗ್ಯ ವಿಮಾ ಯೋಜನೆ
*100ರೂ. ಪಾವತಿಸಿ ನೋಂದಣಿ ಮಾಡುವ ಮೂಲಕ ಕುಟುಂಬದ ಯಜಮಾನ, ಪತ್ನಿ, ಮೂರು ಮಕ್ಕಳು ಸೇರಿದಂತೆ ಗರಿಷ್ಠ ಐದು ಸದಸ್ಯರು ಯೋಜನೆಗೆ ಸೇರಬಹುದಾಗಿದ್ದು ತಂದೆ ತಾಯಿಯನ್ನು ಸೇರಿಸುವುದಾದರೆ ಹೆಚ್ಚುವರಿ ಕೇವಲ 150ರೂ. ಪಾವತಿಸಬೇಕು.
*ಮೂರು ತಿಂಗಳ ಮಗುವಿನಿಂದ 70ತಿಂಗಳ ಹಿರಿಯರವರೆಗೆ ಈ ವಿಮೆ ಲಭ್ಯ.
*ಒಂದು ವರ್ಷದ ಅವಧಿಯಲ್ಲಿ ಒಂದು ಕುಟುಂಬಕ್ಕೆ ಸಿಗುವ ವೈದ್ಯಕೀಯ ಸೌಲಭ್ಯ 30ಸಾವಿರ ರೂ. ಗಳಿಗೆ ಸೀಮಿತವಾಗಿರುತ್ತದೆ.
*ಒಳ ರೋಗಿಯಾಗಿ ದಾಖಲಾದಾಗ ಸಿಗುವ ವೈದ್ಯಕೀಯ ಸೌಲಭ್ಯ ಒಂದು ಬಾರಿಗೆ 9ಸಾವಿರ ರೂ. ಸೀಮಿತ
*ಕುಟುಂಬದ ಯಜಮಾನ ವಿಮೆಯ ಅವಧಿಯಲ್ಲಿ ಅಪಘಾತದಲ್ಲಿ ಮರಣ ಹೊಂದಿದಲ್ಲಿ 25ಸಾವಿರ ರೂ. ಪರಿಹಾರ ಹಾಗೂ ಈ ಅವ„ಯಲ್ಲಿ ಒಳರೋಗಿಯಾಗಿ ದಾಖಲಾದಲ್ಲಿ 50ರೂ. ಗಳಂತೆ 15ದಿನಗಳವರೆಗೆ ಗರಿಷ್ಠ 750ರೂ. ಸಹಾಯಧನ ನೀಡಲಾಗುವುದು.
*ಸದಸ್ಯರು ಈ ಯೋಜನೆಯ ಸವಲತ್ತುಗಳನ್ನು ಒಳರೋಗಿಗಳಾಗಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆ ಮತ್ತು ನಿಟ್ಟೆಯ ಗಾಜ್ರಿಯಾ ಸ್ಪೆಷಾಲಿಟಿ ಆಸ್ಪತ್ರೆಯ ಜನರಲ್ ವಾರ್ಡ್‍ನಲ್ಲಿ ಮಾತ್ರ ಪಡೆಯಬಹುದು.
*ಪೂರ್ವಪೀಡಿತ ರೋಗಗಳಿಗೂ(ಉದಾ: ಸಿಹಿಮೂತ್ರ, ಅ„ಕ ರಕ್ತದೊತ್ತಡ, ಅಸ್ತಮಾ) ಈ ಯೋಜನೆಯಲ್ಲಿ ಸೇವೆ ಲಭ್ಯವಿದೆ. ಎಚ್‍ಐವಿ ರೋಗಿಗಳಿಗೆ ಈ ಯೋಜನೆಯ ಸವಲತ್ತುಗಳು ಲಭ್ಯವಿರುವುದಿಲ್ಲ.
*ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವ ಸಮಯದಲ್ಲಿ ಇನ್‍ಶೂರೆನ್ಸ್ ಕಂಪೆನಿಯ ಕೊನೆಯ ಮಂಜೂರಾತಿ ಬರುವ ತನಕ ರೋಗಿ ಆಸ್ಪತ್ರೆಯಲ್ಲಿ ಕಾಯತಕ್ಕದ್ದು.
*ಆಸ್ಪತ್ರೆಯಿಂದ ಬಿಡುಗಡೆಗೊಂಡ ರೋಗಿ 60ದಿವಸದೊಳಗೆ ಪುನಃ ಒಳರೋಗಿಯಾಗಿ ದಾಖಲಾದಲ್ಲಿ ಈ ಯೋಜನೆ ಅನ್ವಯಿಸುವುದಿಲ್ಲ.
*ಆಸ್ಪತ್ರೆಗೆ ದಾಕಲಾಗುವ ಸಮಯದಲ್ಲಿ ರೋಗಿಯ ನೋಂದಾವಣೆಗೆ ಕೊಟ್ಟ ಹೆಸರು ಮತ್ತು ಪ್ರಾಯವನ್ನು ಸರಿಯಾಗಿ ಕೊಡತಕ್ಕದ್ದು.
*ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ಹೆಲ್ತ್ ಕಾರ್ಡ್‍ನೊಂದಿಗೆ ವಿಮಾ ಯೋಜನೆಯ ವಿಭಾಗವನ್ನು ಸಂಪರ್ಕಿಸಬೇಕು.
ಹೊರರೋಗಿಗಳಾಗಿ ಆಸ್ಪತ್ರೆಯ ವತಿಯಿಂದ ಪಡೆಯಬಹುದಾದ ವಿಶೇಷ ಸವಲತ್ತುಗಳು
ವೈದ್ಯಕೀಯ ಸಲಹೆ ಉಚಿತ
ದಂತ ಚಿಕಿತ್ಸೆ ಉಚಿತ (ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಮಾತ್ರ)
ಪ್ರಯೋಗ ಶಾಲೆ ಪರೀಕ್ಷೆಗಳು 30ಶೇ. ರಿಯಾಯಿತಿ
ಚಿಕಿತ್ಸಾ ವಿಧಾನಗಳು 30ಶೇ. ರಿಯಾಯಿತಿ
ಸಿಟಿಸ್ಕಾ ್ಯನ್, ಎಂ.ಆರ್.ಐ, ಎಕೊ, ಟಿಎಂಟಿ ಮೊದಲಾದವುಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ. ಪ್ರತಿ ವರ್ಷ ಪಾವತಿಸಬೇಕಾದ ನೋಂದಣಿ ಶುಲ್ಕ ಬಿಪಿಎಲ್ ಕಾರ್ಡ್‍ದಾರರಿಗೆ 100ರೂ. ಮತ್ತು ಇತರರಿಗೆ 250ರೂ. (ಎಪಿಎಲ್, ಒಂದು ಕುಟುಂಬದ ಐದು ಸದಸ್ಯರಿಗೆ)
ಕ್ಷೇಮ ಆರೋಗ್ಯ ವಿಮಾ ಯೋಜನೆಯ ದಾಖಲಾತಿಗೆ ಬೇಕಾಗುವ ದಾಖಲೆಪತ್ರಗಳು: *ರೇಷನ್ ಕಾರ್ಡ್‍ನ ಎರಡು ಝೆರಾಕ್ಸ್ ಪ್ರತಿ *ವಿಮಾ ಯೋಜನೆಗೆ ಸೇರುವ 5ಜನರ ಮತ ಚೀಟಿಯ ಎರಡು ಝೆರಾಕ್ಸ್ ಪ್ರತಿ *ಸಣ್ಣ ಮಕ್ಕಳಾದರೆ ಜನನ ಪತ್ರದ ಎರಡು ಝೆರಾಕ್ಸ್ ಪ್ರತಿ.
ಹೆಚ್ಚಿನ ಮಾಹಿತಿಗಾಗಿ ಮೊ. ನಂಬ್ರ 9449366744ಗೆ ಸಂಪರ್ಕಿಸಬಹುದು. ನೋಂದಣಿ ಪ್ರಕ್ರಿಯೆ ಆರಂಭ ಫೆಬ್ರವರಿ, 2016ರಿಂದ.
ನೋಂದಾವಣಿಯ ಕೇಂದ್ರಗಳು: ಇನ್‍ಶೂರೆನ್ಸ್ ವಿಭಾಗ, ಕೆ.ಎಸ್.ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ/ಸೇವಾಂಜಲಿ ಪ್ರತಿಷ್ಠಾನ ಪರಂಗಿಪೇಟೆ/ಒಡಿಯೂರು ಸಂಸ್ಥಾನ ಒಡಿಯೂರು.
ಹಾಗೆಯೇ ಹೆರಿಗೆ, ಸಿಸೇರಿಯನ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಸೀಳುತುಟಿ ಮತ್ತು ಮುಖದ ವಿಕಲಾಂಗತೆಗೆ ಸಂಬಂ„ಸಿದ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುವುದು.