ಹೈದರಾಬಾದ್: ಶಾಲಾ ಶೌಚಾಲಯದಲ್ಲೇ 13 ವರ್ಷ ಪ್ರಾಯದ ವಿದ್ಯಾರ್ಥಿನಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಅಚ್ಚರಿ ಘಟನೆಯೊಂದು ತೆಲಂಗಾಣದ ಮಾಧಾಪುರ ಪಟ್ಟಣದಲ್ಲಿ ನಡೆದಿದೆ.
ಬುಡಕಟ್ಟು ಸಮುದಾಯಕ್ಕೆ ಸೇರಿದ 9ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಎಂದು ತಿಳಿದು ಬಂದಿದ್ದು, ತರಗತಿ ನಡೆಯುತ್ತಿದ್ದಾಗಲೇ ಹೆರಿಗೆ ನೋವನ್ನು ಅನುಭವಿಸತೊಡಗಿದ ಈಕೆಗೆ ತನಗೆ ಏನಾಗುತ್ತಿದೆ ಎಂಬ ಅರಿವೇ ಇರಲಿಲ್ಲ. ತನಗೆ ಹೊಟ್ಟೆ ನೋವು ಬರುತ್ತಿದೆ ಎಂದು ವಿದ್ಯಾರ್ಥಿನಿಯು ತರಗತಿಯ ಶಿಕ್ಷಕಿಯಲ್ಲಿ ಹೇಳಿಕೊಂಡಾಗ ಆ ಶಿಕ್ಷಕಿಯು ಶೌಚಾಲಯಕ್ಕೆ ಹೋಗುವಂತೆ ಆಕೆಗೆ ಸೂಚಿಸಿದರು.
ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ವಿದ್ಯಾರ್ಥಿನಿಯ ಹೆರಿಗೆಯು ನಡೆದದ್ದು ಶನಿವಾರ – ಆದರೆ ಎಲ್ಲರ ಗಮನಕ್ಕೆ ಬಂದದ್ದು ಸೋಮವಾರ ! ಈಗ ವಿದ್ಯಾರ್ಥಿನಿ ಮತ್ತು ಆಕೆ ಹೆತ್ತಿರುವ ಮಗು ಆಸ್ಪತ್ರೆಯಲ್ಲಿದ್ದು ಇಬ್ಬರೂ ಸುರಕ್ಷಿತವಾಗಿದ್ದಾರೆ.
ಘಟನೆಯ ಬಗ್ಗೆ ಜಿಲ್ಲಾ ವಿದ್ಯಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಪ್ರಾಥಮಿಕ ತನಿಖೆಯ ಬಳಿಕ ಪೊಲೀಸರು ಮಗು ಹೆತ್ತ ವಿದ್ಯಾರ್ಥಿನಿಯ ಜತೆಗೆ ಸದಾ ಶಾಲೆಗೆ ಬರುತ್ತಿದ್ದ ಯುವಕರ್ನೊವನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ದಿನೇಶ್ ಎಂಬ ಹೆಸರಿನ ಈ ತರುಣ ವಿದ್ಯಾರ್ಥಿನಿಯನ್ನು ಗರ್ಭಿಣಿಯಾಗಿ ಮಾಡಿದ್ದನೆಂಬ ಶಂಕೆ ಇದೆ.