Site icon Ullalavani

ಕೊಲ್ಯ: ಅಷ್ಟಪವಿತ್ರ ನಾಗಮಂಡಲೋತ್ಸವಕ್ಕೆ ಭೂಮಿ ಪೂಜೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಲ್ಯ: ನಾವು ಮಾಡುವ ಕಾರ್ಯ, ಮಾತು ಮಾನಸಿಕವಾಗಿ ನಮ್ಮಿಂದ ಯಾರಿಗಾದರೂ ನೋವಾಗಿರುತ್ತದೆ. ಕಾಯಿಕ, ವಾಚಿಕ, ಮಾನಸಿಕ ತಪ್ಪುಗಳು ಒಂದಿಲ್ಲೊಂದು ರೀತಿಯಲ್ಲಿ ನಡೆದಿರುವುದರಿಂದ ಅದರಿಂದ ಎದುರಾಗುವ ಪಾಪಕೃತ್ಯ ದೂರವಾಗಬೇಕಾದರೆ ನಾವು ದೇವರಿಗೆ ಶರಣಾಗುವುದೊಂದೇ ದಾರಿ. ಆ ದಿಸೆಯಲ್ಲಿ ಪರಿಹಾರಕ್ಕೋಸ್ಕರ ನಾಗದೇವರ ಪೂಜೆಯೂ ಒಂದಾಗಿದ್ದು ನಾಗಮಂಡಲೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಪಾಪ ಪರಿಹಾರ ಮಾಡಿಕೊಳ್ಳಲು ಹಾಗೂ ಪುಣ್ಯಕಟ್ಟಿಕೊಳ್ಳಲು ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ವೇದಮೂರ್ತಿ ಶ್ರೀ ವೆಂಕಟರಮಣ ಆಸ್ರಣ್ಣ ನುಡಿದರು.

ಅವರು ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರೀ ಕ್ಷೇತ್ರದ ವತಿಯಿಂದ ಕ್ಷೇತ್ರದ ವಠಾರದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಸಮಿತಿ ಆಶ್ರಯದಲ್ಲಿ ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ಸೋಮವಾರ ನಡೆದ ಭೂಮಿಪೂಜೆ(ಚಿಟ್ಟೆ ಪೂಜೆ)ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಭೂಕಂಪ ಎಂಬುದು ಆದಿಶೇಷನ ಅಲುಗಾಡುವಿಕೆಯ ಪರಿಣಾಮ ಎಂಬ ನಂಬಿಕೆ ಇರುವುದರಿಂದಲೇ ನಾಗದೇವರನ್ನು ತೃಪ್ತಿಪಡಿಸಿದರೆ ನಾಗದೇವರು ಸ್ವಲ್ಪಮಟ್ಟಿಗೆ ಶಾಂತನಾಗುತ್ತಾರೆ. ಶಾಸ್ತ ್ರದಲ್ಲಿ ಉಲ್ಲೇಖಿಸಿರುವಂತೆ ನಿಧಿಯನ್ನು ಕಾಯುವವ ನಾಗದೇವ, ಅನಂತ. ಸಹಸ್ರ ಶಿರವುಳ್ಳ ಆದಿಶೇಷ ಭೂಮಿಯನ್ನು ಹೊತ್ತಿಕೊಂಡಿದ್ದು ಆ ದೇವರ ಪ್ರೀತ್ಯಾರ್ಥವಾಗಿ ನಾಗಾರಾಧನೆ ನಡೆಯುತ್ತಿದೆ. ನಾಗಮಂಡಲೋತ್ಸವಕ್ಕೆ ಆಗಮಿಸುವ ಭಕ್ತರನ್ನು ಉಪಚರಿಸುವುದರಿಂದ ಅವರು ತೃಪ್ತರಾಗುತ್ತಾರೆ. ದೇವರ ಅನುಗ್ರಹವೇ ಇಲ್ಲಿ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ಕೊಲ್ಯದಲ್ಲಿ ನಡೆಯುವ ನಾಗಮಂಡಲೋತ್ಸವ ಉತ್ಕ ೃಷ್ಟ ರೀತಿಯಿಂದ ನಡೆಯಲಿ ಎಂದು ಶುಭ ಹಾರೈಸಿದರು.

ತಲಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಿರಿಯ ಅರ್ಚಕ ವೇದಮೂರ್ತಿ ಟಿ. ಬಾಲಕೃಷ್ಣ ಭಟ್ ತಲಪಾಡಿ, ಉಳ್ಳಾಲ ಉಳಿಯ ಶ್ರೀ ಧರ್ಮಅರಸರ ಕ್ಷೇತ್ರದ ಧರ್ಮಶ್ರೀ ದೇವು ಮೂಲ್ಯಣ್ಣ, ಉಳ್ಳಾಲಬೈಲು ಶ್ರೀ ವೈದ್ಯನಾಥ ದೈವಸ್ಥಾನದ ಅರ್ಚಕ ದಾಮೋದರ ಪೂಜಾರಿ, ಉಳ್ಳಾಲ ಬಂಡಿಕೊಟ್ಯ ಶ್ರೀ ಮಲರಾಯ ದೇವಸ್ಥಾನದ ಅರ್ಚಕ ಮುಂಡ ಯಾನೆ ಸದಾಶಿವ ಪೂಜಾರಿ, ತಲಪಾಡಿ ಅಲಂಕಾರಗುಡ್ಡೆ ಶ್ರೀ ಮಲರಾಯ ಧೂಮಾವತಿ ದೇವಸ್ಥಾನದ ಅರ್ಚಕ ಅಂತ ಯಾನೆ ಜಯರಾಮ ಪೂಜಾರಿ, ಉಳ್ಳಾಲ ಶ್ರೀ ಚೀರುಂಭ ಭಗವತೀ ದೇವಸ್ಥಾನದ ಅರ್ಚಕ ಮಂಜಪ್ಪ ಕಾರ್ನವರು, ಉಳ್ಳಾಲ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದ ಅರ್ಚಕ ಸುಭಾಷ್ ಅಮೀನ್, ಅಡ್ಕ ಶ್ರೀ ಭಗವತೀ ದೇವಸ್ಥಾನದ ಅರ್ಚಕ ವಸಂತ ಪೂಜಾರಿ, ಮಾಡೂರು ಶ್ರೀ ಪಾಡಂಗರ ಭಗವತೀ ಕ್ಷೇತ್ರದ ಅರ್ಚಕ ನಾರಾಯಣ ಬಂಗೇರ ಕಾರ್ನವರು, ಪೆÇಲದವರ ಯಾನೆ ಗಟ್ಟಿ ಸಮಾಜದ ಮೇಲ್ಡರು ನಾರಾಯಣ ಗಟ್ಟಿ, ಕಾಪಿಕಾಡು ಶ್ರೀ ಉಮಾಮಹೇಶ್ವರೀ ದೇವಸ್ಥಾನದ ಮೊಕ್ತೇಸರ ಈಶ್ವರ್ ಉಳ್ಳಾಲ್, ಚೆಂಬುಗುಡ್ಡೆ ಬ್ರಹ್ಮ ಮುಗೇರ ಮಹಾಕಾಳಿ ದೇವಸ್ಥಾನ ಆಡಳಿತ ಮೊಕ್ತೇಸರ ಯು.ಕೆ.ಬಾಬು, ಉಳ್ಳಾಲ ಪುಣ್ಕೆತ್ತಡಿ ಆದಿಕ್ಷೇತ್ರ ರವೀಂದ್ರ ಗುರಿಕಾರ, ವಾಸ್ತು ಮತ್ತು ಶಿಲ್ಪ ಶಾಸ್ತ್ರ ತಜ್ಞ ಪೆರ್ಲ ರಾಮಕೃಷ್ಣ ಆಚಾರ್ಯ, ಸೋಮೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಶೀಲಾ ನಾಯಕ್, ಮನಪಾ ಕಾಪೆರ್Çರೇಟರ್ ಪ್ರೇಮಾನಂದ ಶೆಟ್ಟಿ, ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರೀ ಕ್ಷೇತ್ರದ ಧರ್ಮದರ್ಶಿ ಶ್ರೀ ಭಾಸ್ಕರ್ ಐತಾಳ್, ನಾಗಬ್ರಹ್ಮ ಸೇವಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಶಾಂತ್ ಭಂಡಾರಿ, ಕೊಲ್ಯ ಅಷ್ಟಪವಿತ್ರ ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ನಿರ್ದೇಶಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಜಗದೀಶ್ ಭಟ್ ಮರಕಡ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಚಂದ್ರಶೇಖರ್ ಉಚ್ಚಿಲ್, ಚಂದ್ರಹಾಸ್ ಉಳ್ಳಾಲ್, ಸದಾಶಿವ ಉಳ್ಳಾಲ್, ರವೀಂದ್ರನಾಥ ಪೂಂಜ, ರವೀಂದ್ರ ಬೆಳ್ಚಪ್ಪಾಡ, ರಾಮಚಂದ್ರ ಪಿಲಾರು ಹಾಗೂ ಮೋಹನ್‍ದಾಸ್ ಶೆಟ್ಟಿ ನೆತ್ತಿಲ ಉಪಸ್ಥಿತರಿದ್ದರು.

ಸತ್ಯಜಿತ್ ರೈ ಸುರತ್ಕಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೋಪಾಲಕೃಷ್ಣ ಮೇಲಂಟ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಆನಂದ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಹೇಶ್ ಮೂರ್ತಿ ಸುರತ್ಕಲ್ ವಂದಿಸಿದರು.

Exit mobile version