ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಸಂಘ ಸಂಸ್ಥೆಗಳು ,ಆಸ್ಪತ್ರೆಗಳು ಸೇರಿ ನಡೆಸುವ ಉಚಿತ ಆರೋಗ್ಯ ಶಿಬಿರಗಳಲ್ಲಿ ತಾತ್ಸಾರ ಮನೋಭಾವವಿರಿಸದೆ ಮುಕ್ತವಾಗಿ ಭಾಗವಹಿಸಿದಲ್ಲಿ ಸಾರ್ವಜನಿಕರು ಉತ್ತಮ ಆರೋಗ್ಯ ಬೆಳೆಸಲು ಸಾಧ್ಯ ಎಂದು ಮಂಗಳೂರು ಕೆಎಮ್‍ಸಿ ಆಸ್ಪತ್ರೆಯ ವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ಹರ್ಬರ್ಟ್ ಮರಿಯೊ ಪಿರೇರ ಅವರ ಅಭಿಪ್ರಾಯ ಪಟ್ಟರು .
ಅವರು ಆತ್ಮ ಶಕ್ತಿ ವಿವಿದ್ಧೋದ್ಧೇಶ ಸಹಕಾರಿ ಸಂಘ(ನಿ) ಉಳ್ಳಾಲ ಶಾಖೆ ಮತ್ತು ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಮತ್ತು ಮಹಿಳಾ ಘಟಕ ಬಂಡಿಕೊಟ್ಯ ,ಉಳ್ಳಾಲ ಇವರ ಜಂಟಿ ಆಶ್ರಯದಲ್ಲಿ ಭಾನುವಾರದಂದು ಉಳ್ಳಾಲ ನಗರಸಭೆಯ ಸಮುದಾಯ ಭವನದಲ್ಲಿ ನಡೆದ “ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು “ಉದ್ಘಾಟಿಸಿ ಮಾತನಾಡಿದರು.
ಆತ್ಮಶಕ್ತಿ ವಿವಿದ್ಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ ತಮ್ಮ ಸಹಕಾರಿ ಸಂಘದ ವತಿಯಿಂದ ಎಲ್ಲರಿಗೂ ಉತ್ತಮ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ನಿರಂತರವಾಗಿ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಾ ಬಂದಿದ್ದು ,ಈ ಶಿಬಿರದಲ್ಲೂ ಎಲ್ಲಾ ವಿಭಾಗದ ನುರಿತ ವೈದ್ಯರನ್ನು ನಿಯೋಜಿಸಲಾಗಿದೆ.ಶಿಬಿರಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಕೆಎಮ್‍ಸಿ ಆಸ್ಪತ್ರೆಯಲ್ಲಿ ಸಂಘದ ವತಿಯಿಂದಲೇ ಚಿಕಿತ್ಸೆ ನೀಡಿ ,ಶಸ್ತ್ರ ಚಿಕಿತ್ಸೆ ಅಗತ್ಯ ಬಿದ್ದಲ್ಲಿ ಅದರ ಖರ್ಚನ್ನೂ ಭರಿಸುವುದಾಗಿ ಹೇಳಿದರು.
ಬಂಡಿಕೊಟ್ಯ ಮಲರಾಯ ದೈವಸ್ಥಾನದ ಅರ್ಚಕರಾದ ಸದಾಶಿವ ಪೂಜಾರಿ ,ಬಂಡಿಕೊಟ್ಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಉಳ್ಳಾಲ್ ,ಮಹಿಳಾ ಘಟಕದ ಗೌರವಾಧ್ಯಕ್ಷೆ ಹರಿಣಾಕ್ಷಿ , ನಗರಸಭಾ ಸದಸ್ಯೆ ಸೂರ್ಯಕಲಾ ,ಉದ್ಯಮಿ ಗೋಕುಲ್ ದಾಸ್ ,ಆತ್ಮಶಕ್ತಿ ವಿವಿಧ್ಧೋದ್ಧೇಶ ಸಂಘದ ನಿರ್ದೇಶಕರುಗಳಾದ ಆನಂದ ಎಸ್ ಕೊಂಡಾಣ , ವಾಮನ್ ಕೆ , ಶ್ರೀಮತಿ ಜ್ಯೋತಿ ಚಂದ್ರ ಮೊದಲಾದವರು ಉಪಸ್ಥಿತರಿದ್ದರು.
ನೇಮಿರಾಜ್ ಸ್ವಾಗತಿಸಿ ,ಜಗದೀಶ್ ಗೋಳಿಯಾಡಿ ವಂದಿಸಿದರು.ನವೀನ್ ನಿರೂಪಿಸಿದರು.